ಪುತ್ತೂರು: ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರ ಷ್ಟಾಚಾರ-ಆರೋಪ

Posted on April 7, 2011

0


ಪುತ್ತೂರು: ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಜನರ ರಕ್ತ ಹೀರುವ ಈ ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ ಮಂದಿಯ ವಿರುದ್ದವೇ ಬ್ರೋಕರ್‌ಗಳು ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಇದಕ್ಕೆ ಭ್ರಷ್ಟ ಅಧಿಕಾರಿಗಳು ಕುಮ್ಮಕ್ಕು ನೀಡು ತ್ತಿದ್ದಾರೆ ಎಂದು ಆರೋಪಿಸಿದ ಪುರ ಸಭಾ ಸದಸ್ಯ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಇನ್ನು ಮುಂದೆ ಬ್ರೋಕರ್ಗಳು ಭ್ರಷ್ಟಾ ಚಾರದ ವಿರುದ್ದ ಹೋರಾಡುವವರ ವಿರುದ್ದ ಪತ್ರಿಕಾಗೋಷ್ಟಿ ನಡೆಸಿ ಸುಳ್ಳು ಆರೋಪ ಮಾಡಿದರೆ ಜನರ ಮೂಲಕ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ, ಎಲ್ಲಾ ಜನಪ್ರತಿ ನಿಧಿಗಳು ಹೋರಾಟಕ್ಕೆ ಕೈ ಜೋಡಿಸ ಬೇಕು ಎಂದು ಪುರಸಭಾ ವಿಪಕ್ಷ ಸದಸ್ಯ ರಾದ ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಬುಧವಾರ ಸುದ್ಧಿ ಗೋಷ್ಟಿಯಲ್ಲಿ ಮಾತನಾಡಿ ಅವರು ಇಲಾಖೆಗಳಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಪುರಸಭೆ, ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದಳ್ಳಾಳಿಗಳ ಹಾವಳಿಯಿಂದ ಜನಸಾ ಮಾನ್ಯರು ತೊಂದರೆ ಅನುಭವಿಸು ವಂತಾಗಿದೆ. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬ್ರೋಕರ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿರುತ್ತೇವೆ ಎಂದರು.

ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತ್ತಾ ಜನಜಾಗೃತಿ ಮೂಡಿಸು ತ್ತಿರುವ ಮೂಲಕ ನಮಗೆಲ್ಲರಿಗೂ ಮಾದರಿಯಾಗಿರುವ ಪುರಸಭೆಯ ವಿಪಕ್ಷ ನಾಯಕ ಹೆಚ್. ಮಹಮ್ಮದ್ ಆಲಿ ಮೇಲೆ ದಳ್ಳಾಳಿಗಳು ಪತ್ರಿಕಾ ಗೋಷ್ಟಿ ನಡೆಸಿ ಸುಳ್ಳು ಆರೋಪ ಹೊರಿ ಸುವುದನ್ನು ಖಂಡಿಸುವುದಾಗಿ ಅವರು ತಿಳಿಸಿದರು. ಸುದ್ಧಿಗೋಷ್ಟಿಯಲ್ಲಿ ಪುರ ಸಭಾ ಸದಸ್ಯರಾದ ಅನ್ವರ್ ಖಾಸಿಂ, ಜಯಂತಿ, ದೀಕ್ಷಾ ಪೈ ಮತ್ತು ಲೀನಾ ಮಸ್ಕರೇನಸ್ ಉಪಸ್ಥಿತರಿದ್ದರು.

Advertisements