ಪುತ್ತೂರು: ಕಳ್ಳರ ಪತ್ತೆಗೆ ಎರಡು ತಂಡ ರಚನೆ

Posted on April 7, 2011

0


ಮಂಗಳೂರು: ಪುತ್ತೂರು ತಾಲೂಕಿನ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆಯಲು ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಎಎಸ್‌ಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ. ಪುತ್ತೂರು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳ ಬಗ್ಗೆ ಇಬ್ಬರು ಎಸ್.ಐ. ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಜಾತ್ರೆಯ ಸಂದರ್ಭ ಕಳ್ಳತನ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಎಎಸ್‌ಪಿ ಹೇಳಿದ್ದಾರೆ.

ಸಾರ್ವಜನಿಕರು ಹೆಚ್ಚುತ್ತಿರುವ ಕಳ್ಳತನ ಕೃತ್ಯಗಳ ತಡೆಗೆ ಎಚ್ಚರಗೊಳ್ಳಬೇಕು ಎಂದು ವಿನಂತಿಸಿರುವ ಎಎಸ್‌ಪಿ ಅವರು, ಸಾರ್ವಜನಿಕರು ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಮನೆಗೆ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕು. ಮನೆಗೆ ಬೀಗ ಹಾಕಿ ಹೊರಹೋಗುವ ಸಂದರ್ಭದಲ್ಲಿ ಪಕ್ಕದ ಮನೆಯವರಲ್ಲಿ ನಿಗಾ ಇಡುವಂತೆ ಸೂಚಿಸಬೇಕು, ಕಳವು ಕೃತ್ಯ ತಡೆಯಲು ಪೊಲೀಸರೊಂದಿಗೆ ಸಹಕರಿಸಿ ಎಂದು ವಿನಂತಿಸಿದ್ದಾರೆ.

Advertisements