ನಾಳೆ ಮದನಿ ವಿಚಾರಣೆ

Posted on April 7, 2011

0


ಕಾಸರಗೋಡು: ಬೆಂಗಳೂರು ಸರಣಿ ಸ್ಫೋಟ ಪ್ರಕರಣದನ್ವಯ ಬಂಧಿಸಲಾಗಿರುವ ಕೇರಳದ ಪಿಡಿಪಿ ಪಕ್ಷದ ನಾಯಕ ಅಬ್ದುಲ್ ನಾಸಿರ್ ಮದನಿ ಅವರ ವಿಚಾರಣೆ ನಾಳೆ (ಎ.೮) ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಾರ‍್ಯಕರ್ತರು ತೀವ್ರ ಕುತೂ ಹಲ ಭರಿತರಾಗಿದ್ದಾರೆ.

೩೪ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯ ಮೂರ್ತಿ ಎಚ್.ಎಲ್ ಶ್ರೀನಿವಾಸ್ ವಿಚಾರಣೆ ಕೈಗೆತ್ತಿಕೊಳ್ಳಲಿರುವಂತೆ ತಮ್ಮ ಅತ್ಯಂತ ವರಿಷ್ಠ ನಾಯಕ ನಿರ್ದೋಷಿಯಾಗಿ ಬಿಡುಗಡೆಗೊಳ್ಳಲೆಂಬ ಪ್ರಾರ್ಥನೆ ಪಿಡಿಪಿ ಕಾರ‍್ಯಕರ್ತರು ಮಾಡುತ್ತಿದ್ದಾರೆ.

ಮದನಿ ಇಂಥ ದೇಶದ್ರೋಹಿ ಕೆಲಸವನ್ನು ಮಾಡಿಯೇ ಇಲ್ಲವೆಂದು ಕಾರ‍್ಯಕರ್ತರು ಈಗಲೂ ಹೇಳುತ್ತಿದ್ದಾರೆ. ಅವರಂಥ ಧಾರ್ಮಿಕ ವಿದ್ವಾಂ ಸರಿಂದ ಇದು ಅಸಾಧ್ಯ. ಅಲ್ಲದೆ ಕೊಯಂಬತ್ತೂರು ಜೈಲಿನಿಂದ ಹೊರಬಂದ ಬಳಿಕ ಅವರ ಜೊತೆಗೆ ಸದಾ ಪೊಲೀಸರು ಅವರ ಎಲ್ಲಾ ಸಂಪರ್ಕಗಳನ್ನು ನಿರೀಕ್ಷಿಸುವ ವ್ಯವಸ್ಥೆಯೂ ಇದೆ.

ಹೀಗಿರುವಾಗ ಎರಡೂ ಕಾಲುಗಳನ್ನು ಕಳೆದುಕೊಂಡು ವೀಲ್‌ಚೇರ್‌ನಲ್ಲಿ ಓಡಾಡುವ ವ್ಯಕ್ತಿಯಿಂದ ಇದೆಲ್ಲಾ ಸಾಧ್ಯವೇ ಎನ್ನುತ್ತಾರೆ ಕಾರ‍್ಯಕರ್ತರು.

ಅಂತೂ ವಿಚಾರಣೆ ಆರಂಭವಾಗಿದೆ. ಒಟ್ಟು ಒಂಭತ್ತು ಪ್ರಕರಣಗಳಲ್ಲಿ ೩೨ನೇ ಆರೋಪಿಗಳಿದ್ದು ಮದನಿ ೩೧ನೇ ಆರೋಪಿಯಾಗಿದ್ದಾರೆ.

Advertisements