ದ.ಕ, ಉಡುಪಿ: ಪುರುಷರಿಗಿಂತ ಮಹಿಳೆಯರೇ ಹೆಚ್ಚು!

Posted on April 7, 2011

0


ಬೆಂಗಳೂರು: ಪುರುಷರಿಗಿಂತ ಮಹಿಳೆಯರು ಉಡುಪಿ, ಚಿಕ್ಕಮಗ ಳೂರು, ಹಾಸನ, ದ.ಕ., ಕೊಡಗು ಜಿಲ್ಲೆಗಳಲ್ಲಿ ಹೆಚ್ಚಾಗಿದ್ದಾರೆ. ಆದರೆ ಬೆಂಗ ಳೂರು ಲಿಂಗಾನುಪಾತ ಅತಿ ಕಡಿಮೆ ಇದ್ದು, ಪ್ರತಿ ಸಾವಿರ ಪುರುಷರಿಗೆ ೯೦೮ ಮಹಿಳೆಯರು ಇರುವ ಅಂಶ ಬೆಳಕಿಗೆ ಬಂದಿದೆ.

ರಾಜ್ಯದ ಒಟ್ಟಾರೆ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಇಳಿಕೆಯಾಗಿದ್ದರೆ, ಸಾಕ್ಷರತೆ ಹಾಗೂ ಲಿಂಗಾನುಪಾತದಲ್ಲಿ ಏರಿಕೆಯಾಗಿದೆ ಎಂದಿರುವ ರಾಜ್ಯ ಜನಗಣತಿ ನಿರ್ದೆಶಕ ಟಿ.ಕೆ.ಅನಿಲ್ ಕುಮಾರ್ ಬೆಂಗಳೂರು ನಗರ ಜಿಲ್ಲೆ ಯಲ್ಲಿ ಅತಿ ಹೆಚ್ಚು ಜನ ಸಾಂದ್ರತೆ ಇದ್ದು, ಕೊಡಗು ಜಿಲ್ಲೆ ಅತಿ ಕಡಿಮೆ ಜನ ಸಾಂದ್ರತೆ ಹೊಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ೨೦೧೧ ಜನಗಣತಿ ವರದಿಯ ತಾತ್ಕಾಲಿಕ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜನಗಣತಿಯ ಪೂರ್ಣ ವರದಿ ಮುಂದಿನ ವರ್ಷ ಬಿಡುಗಡೆ ಮಾಡಲಾಗುವುದು. ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಎರಡು ಹಂತದಲ್ಲಿ ಸಂಗ್ರಹಿಸಿರುವ ಜನಗಣತಿ ಮಾಹಿತಿ ಏ.೨೦ರೊಳಗೆ ಲಭ್ಯವಾಗಲಿದ್ದು, ಆ ನಂತರ ಕ್ರೋ ಡೀಕೃತ ಅಂಕಿ-ಅಂಶ ದೊರೆಯಲಿದೆ.

ರಾಜ್ಯದ ೩೦ ಜಿಲ್ಲೆಗಳ ಒಟ್ಟು ಜನಸಂಖ್ಯೆ ೬,೧೧,೩೦,೭೦೪ರಷ್ಟಿದ್ದು, ಇದರಲ್ಲಿ ೩,೧೦,೫೭,೭೪೨ ಪುರುಷರು ಹಾಗೂ ೩,೦೦,೭೨,೯೬೨ ಮಹಿಳೆಯರಿ ದ್ದಾರೆ. ಐದು ಜಿಲ್ಲೆಗಳಲ್ಲಿ ಪುರುಷ ರಿಗಿಂತ ಮಹಿಳೆಯರೆ ಹೆಚ್ಚಾಗಿದ್ದರೆ ಉಳಿದ ಜಿಲ್ಲೆಗಳಲ್ಲಿ ಪುರುಷ ಪ್ರದಾನ ವಾಗಿದ್ದು, ಮಹಿಳೆ ಮತ್ತು ಪುರುಷರ ನಡುವೆ ಭಾರೀ ತಾರತಮ್ಯವಿದೆ.

ಒಟ್ಟಾರೆ ರಾಜ್ಯದಲ್ಲಿ ಶೇ.೧೫.೬೭ರಷ್ಟು ಜನಸಂಖ್ಯಾ ಬೆಳವಣಿಗೆದರವಿದೆ. ೨೦೦೧ರ ಜನಗಣತಿಗೆ ಹೋಲಿಸಿದಲ್ಲಿ ಬೆಳವಣಿಗೆ ದರ ಶೇ.೧೭.೫ರಿಂದ ಶೇ.೧೫.೭ಕ್ಕೆ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು ಜಿಲ್ಲೆ ೯೫,೮೮, ೯೧೦ ಜನರನ್ನು ಹೊಂದಿದ್ದು, ಒಟ್ಟು ಜನಸಂಖ್ಯೆಯ ಶೇ.೧೫.೬೯ರಷ್ಟಿದೆ. ಇದು ಹೆಚ್ಚು ಜನಸಂಖ್ಯೆಯುಳ್ಳ ಮೊದಲ ಜಿಲ್ಲೆ., ೫,೫೪,೭೬೨ ಜನಸಂಖ್ಯೆ ಹೊಂದಿ ರುವ ಕೊಡಗು ಅತಿ ಕಡಿಮೆ ಜನಸಂಖ್ಯೆ ಇರುವ ಜಿಲ್ಲೆ.

ಸಾಕ್ಷರತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.೮೮.೬೨ರಷ್ಟಿದ್ದು, ಮೊದಲ ಸ್ಥಾನ ದಲ್ಲಿದೆ. ಬೆಂಗಳೂರು ಶೇ.೮೮. ೪೮ ರಷ್ಟಿದ್ದು, ಎರಡನೇ ಸ್ಥಾನದಲ್ಲಿದೆ. ಯಾದಗಿರ್‌ನಲ್ಲಿ ಶೇ.೫೨.೩೬ರಷ್ಟು ಸಾಕ್ಷರತೆ ಇದ್ದು, ಕೊನೆ ಸ್ಥಾನದಲ್ಲಿದೆ. ಪ್ರತಿ ಚದರ ಕಿ.ಮೀ. ಜನಸಂಖ್ಯೆ ೨೭೬ರಿಂದ ೩೧೯ಕ್ಕೆ ಏರಿಕೆಯಾಗಿದ್ದು, ೪೩ ಮಂದಿ ಏರಿಕೆಯಾಗಿದ್ದು, ಶೇ. ೧೫.೫೮ರಷ್ಟು ವ್ಯತ್ಯಾಸವಿದೆ. ಬೆಂಗಳೂರಿ ನಲ್ಲಿ ೪,೩೭೮ ಜನರಿದ್ದು ಮೊದಲ ಸ್ಥಾನವಿದ್ದರೆ, ೧೩೫ ಜನರನ್ನು ಹೊಂದಿರುವ ಕೊಡಗು ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆಯಾಗಿದೆ.

Advertisements
Posted in: State News