ತೈಲ ಕೊಳವೆಗೆ ಕನ್ನ: ಓರ್ವನ ಬಂಧನ

Posted on April 7, 2011

0


ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಕಟ್ಟದ ಬೈಲು ಸಮೀಪದ ಕರ್ಚೇಲಿನಲ್ಲಿ ನಡೆದ ತೈಲ ಕಳ್ಳತನ ಪ್ರಕರಣದ ತನಿಖೆ ತೀವ್ರವಾಗಿ ಮುಂದುವರಿಯುತ್ತಿದ್ದು ಪೊಲೀಸರು ಓರ್ವ ನನ್ನು ಬಂಧಿಸಿದ್ದಾರೆ.ಇಲ್ಲಿ ತೈಲ ಕೊಳವೆಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ತೈಲವನ್ನು ಟ್ಯಾಂಕರ್‌ಗೆ ತುಂಬಿಸಿ ಮಾರಾಟ ಮಾಡಲಾಗುತ್ತಿತ್ತು. ಸ್ಥಳೀಯರ ಸಹಕಾ ರದಿಂದ ಪೋಲಿಸರು ಈ ಪ್ರಕರಣವನ್ನು ಬೇಧಿಸಿದ್ದಾರೆ.

ಓಡಿಲ್ನಾಳ ಗ್ರಾಮದವನೇ ಆದ ಸಂತೋಷ ಕುಮಾರ್ (೨೪) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹತ್ವದ ಸುಳಿವು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇನ್ನೂ ಸುಮಾರು ಏಳೆಂಟು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾ ರೆಂದು ಹೇಳಲಾಗುತ್ತಿದ್ದು ತನಿಖೆಯ ದಾರಿ ತಪ್ಪುತ್ತದೆಂಬ ದೃಷ್ಟಿಯಿಂದ ತನಿಖೆ ಸಂಪೂ ರ್ಣವಾದ ಬಳಿಕವೇ ಆರೋಪಿಗಳ ಹೆಚ್ಚಿನ ವಿವರ ದೊರೆಯಲಿದೆ ಎಂದು ಹೇಳಲಾಗು ತ್ತಿದೆ. ಹೆಚ್ಚಿನವರು ಹಿಂದಿನ ಪ್ರಕರಣಗಳಲ್ಲೂ ಭಾಗಿಯಾಗಿರುವವರೆಂದೂ ಶಂಕಿಸಲಾಗಿದೆ.

Advertisements
Posted in: Crime News