ತವರಿಗೆ ಬಂದ ಯೋಧನ ಮೃತದೇಹ

Posted on April 7, 2011

0


ಮಂಗಳೂರು : ಮಗುವಿನ ಜನ್ಮದಿನದ ವೇಳೆಗೆ ಎರಡು ತಿಂಗಳ ರಜೆಯಲ್ಲಿ ಬರುತ್ತೇ ನೆಂದಿದ್ದ ಯೋಧ ಹೇಳಿದ ದಿನಕ್ಕಿಂತ ಮೊದಲೇ ಮನೆಗೆ ಬಂದಿದ್ದಾನೆ. ಸಂತೋ ಷದಿಂದ ಯೋಧನನ್ನು ಎದುರುಗೊಳ್ಳ ಬೇಕಾದ ಮನೆ ಮಂದಿ ಕಣ್ಣೀರು ಹರಿಸು ತ್ತಿದ್ದಾರೆ. ಕಾರಣ ಯೋಧ ರಾಷ್ಟ್ರ ಧ್ವಜದಲ್ಲಿ ಸುತ್ತಿದ ಶವವಾಗಿ ಮನೆಗೆ ತಲುಪಿದ್ದಾನೆ.

ಹೌದು ಸೈನ್ಯದಲ್ಲಿ ಕರ್ತವ್ಯದಲ್ಲಿರುವಾಗಲೇ ಅಕಾಲಿಕ ಮರಣಕ್ಕೀಡಾಗಿರುವ ಮಂಗಳೂ ರಿನ ಗಿರೀಶ್‌ನ ಶವ ನಾಲ್ಕು ದಿನದ ತರು ವಾಯ ಕೊನೆಗೂ ಊರು ಸೇರಿದೆ. ಅನ್ನ ನೀರು ಬಿಟ್ಟು ಶವದ ನಿರೀಕ್ಷೆಯಲ್ಲಿದ್ದ ಮನೆ ಮಂದಿ ಕೊನೆಗೂ ಮನೆ ಮಗನಿಗೆ ಅಂತಿಮ ನಮನ ಸಲ್ಲಿಸಿ ತುಳಸಿ ನೀರು ಬಿಟ್ಟಿದ್ದಾರೆ, ಸಹೋದ್ಯೋಗಿಗಳು ತಮ್ಮ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಕಳೆದ ೧೭ ವರುಷಗಳಿಂದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಳೂರು ಕುಂಜತ್ತ ಬೈಲ್ ನಿವಾಸಿಯಾಗಿರುವ ಗಿರೀಶ್, ಸಿಕ್ಕಿಂನಲ್ಲಿ ಕರ್ತವ್ಯದಲ್ಲಿರುವಾಗ ಕಳೆದ ಶನಿವಾರ ಹಿಮ ರಾಶಿಗೆ ಸಿಲುಕಿ ಹೃದಯ ಸ್ತಂಭನಗೊಂಡು ಮೃತಪಟ್ಟಿದ್ದರು. ಸಿಕ್ಕಿಂನಲ್ಲಿ ಹಿಮಪಾತ ತೀವ್ರ ವಾಗಿದ್ದ ಕಾರಣ ಒಂದು ದಿನದ ತರುವಾಯ ಗಿರೀಶ್ ಅವರ ಶವ ಪತ್ತೆಯಾಗಿದ್ದು. ನಿನ್ನೆಯಷ್ಟೆ ಅಧಿಕಾರಿಗಳು ಗಿರೀಶ್ ಶವವನ್ನು ಮನೆಗೆ ತಲುಪಿಸಿದ್ದಾರೆ.

ಒಂದು ವಾರದ ಹಿಂದೆಯಷ್ಟೆ ಮನೆಗೆ ಕರೆ ಮಾಡಿದ್ದ ಗಿರೀಶ್ ‘ತಾನು ರಜೆಯನ್ನು ಕೇಳಿದ್ದು ಮಗುವಿನ ಜನ್ಮದಿನದ ವೇಳೆಗೆ ತನಗೆ ರಜೆ ದೊರೆಯಲಿರುವ ಕಾರಣ ತಾನು ಮುಂದಿನ ತಿಂಗಳು ಊರಿಗೆ ಬರುವು ದಾಗಿ ತಿಳಿಸಿದ್ದರು. ಆದರೆ ವಿಧಿ ನಿಯ ಮವೇ ಬೇರೆಯಾಗಿತ್ತು. ಗಿರೀಶ್‌ಗೆ ಮನೆ ಮಂದಿಯನ್ನು ಮತ್ತೆ ಸೇರುವ ಅವಕಾಶವನ್ನೇ ನೀಡದಂತೆ ತನ್ನ ಬಳಿಗೆ ಕರೆದೊಯ್ದಿದ್ದಾನೆ. ಮಗುವಿನ ಹುಟ್ಟು ಹಬ್ಬಕ್ಕೆ ಬರುತ್ತೇನೆಂಬ ನಿರೀಕ್ಷೆಯಲ್ಲಿದ್ದ ಮನೆ ಮಂದಿಗೆ ಗಿರೀಶ್ ಸಾವು ಬರಸಿಡಿ ಲಾಗಿ ಪರಿಣಮಿಸಿದೆ. ನಿನ್ನೆ ಗಿರೀಶ್ ಶವ ಮನೆಗೆ ಬರುತ್ತಿರುವಂತೆ ಮುಗಿಲು ಮುಟ್ಟಿದ್ದ ಅಕ್ರಂದನದ ಕೂಗು ಇನ್ನೂ ತಗ್ಗಿಲ್ಲ. ಸಾವಿರಾರು ಜನಸ್ತೋಮದ ನಡುವೆ ಸಕಲ ಸರಕಾರಿ ಗೌರವದೊಂದಿಗೆ ಗಿರೀಶ್ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

Advertisements