ಗೂಡಂಗಡಿ ತೆರವು ಕಾರ‍್ಯಾಚರಣೆ: ನಗರಸಭೆ ವಿರುದ್ ಧ ಜನಾಕ್ರೋಶ

Posted on April 7, 2011

0


ಉಡುಪಿ: ನಗರಸಭೆಯಿಂದ ಮತ್ತೆ ಗೂಡಂಗಡಿಗಳ ತೆರವು ಕಾರ‍್ಯಾಚರಣೆ ಪುನರಾರಂಭಗೊಂಡಿದೆ.

ಈಗಾಗಲೇ ಹಲವು ಭಾರಿ ಬಡ ಗೂಡಂಗಡಿಗಳ ಮೇಲೆ ಗಧಾ ಪ್ರಹಾರ ನಡೆಸಿದ ಉಡುಪಿ ನಗರಸಭೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನೆಪವೊಡ್ಡಿ ಗೂಡಂಗಡಿಗಳನ್ನು ಎತ್ತಂಗಡಿ ಮಾಡಿದೆ. ಸಿಟಿ ಬಸ್ ನಿಲ್ದಾಣದ ಬಳಿಯ ಐದಾರು ಗೂಡಂಗಡಿಗಳನ್ನು ಪೊಲೀಸ್ ಭದ್ರತೆಯೊಂದಿಗೆ ಏಕಾಏಕಿ ತೆರವುಗೊಳಿಸಿದೆ. ನಗರಸಭೆಯ ಟೆಂಪೋ ಮತ್ತು ಟ್ರ್ಯಾಕ್ಟರ್ ಬಳಸಿ ಗೂಡಂಗಡಿಗಳಲ್ಲಿದ್ದ ಮಾರಾಟ ವಸ್ತುಗಳನ್ನು ಸಾಗಿಸಿದ್ದಾರೆ.

ಉಡುಪಿ ನಗರಸಭೆ ಕೆಎಂ ಮಾರ್ಗ, ಪೇಜಾವರ ಮಠದ ಬಳಿ ಕನಕದಾಸ ರಸ್ತೆ, ವಾದಿರಾಜ ರಸ್ತೆ ಸಹಿತ ಹಲವಾರು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲುಗಡೆಗೊಳಿಸಿದರೆ ಶುಲ್ಕ ವಸೂಲಿ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಇದೇ ರೀತಿ ಎತ್ತಂಗಡಿ ಮಾಡಲಾಗಿದ್ದು ಇದರ ವಿರುದ್ಧ ಅಂಗಡಿದಾರರು, ನಾಗರಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ದೊಡ್ಡ ದೊಡ್ಡ ಕಟ್ಟಡಗಳ ವಿರುದ್ಧ ಈಗಾಗಲೇ ನೋಟೀಸು ನೀಡಲಾಗಿದ್ದು ಆದರೆ ಅವರ ಕಟ್ಟಡಗಳ ವಿರುದ್ಧ ಯಾವುದೇ ಕಾರ‍್ಯಚರಣೆ ನಡೆಸದೇ ಕೇವಲ ಗೂಡಂ ಗಡಿಗಳ ಮೇಲೆ ಗಧಾಪ್ರಹಾರ ನಡೆಸುತ್ತಿರುವ ಪುರಸಭೆ ವಿರುದ್ಧ ನಾಗರಿಕರು ಆಕ್ರೋಶಗೊಂಡಿದ್ದಾರೆ.

Advertisements
Posted in: Udupi District