ಕಿಡ್ನಿ ಕಲ್ಲಿನ ಶಸ್ತ್ರಚಿಕಿತ್ಸೆ: ಆಸ್ಪತ್ರೆಯ ಲ್ಲಿ ಬೆತ್ತಲಾದ ಪೂನಂ ಪಾಂಡೆ!

Posted on April 7, 2011

0


ಮುಂಬೈ: ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗಿ ತಂಡದಲ್ಲಿ ಹೊಸ ಸ್ಫೂರ್ತಿ ತುಂಬುವುದಾಗಿ ಹೇಳಿರುವ ಮುಂಬೈ ಮೂಲದ ರೂಪದರ್ಶಿ ಪೂನಂ ಪಾಂಡೆ ಕನಸು ಮತ್ತೊಂದು ವಿಧದಲ್ಲಿ ನನಸಾಗಿದೆ. ಕಿಡ್ನಿ ಕಲ್ಲಿನ ಶಸ್ತ್ರ ಚಿಕಿತ್ಸೆಗಾಗಿ ಆಕೆ ಆಸ್ಪತ್ರೆಯಲ್ಲಿ ಬೆತ್ತಲಾಗಿದ್ದಾಳೆ.

ಹೊಟ್ಟೆಯಲ್ಲಿ ಅಸಾಧ್ಯ ನೋವಿನ ಕಾರಣ ಸೋಮವಾರ(ಏ.೪) ರಾತ್ರಿ ಆಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಕಿಡ್ನಿಯಲ್ಲಿ ಕಲ್ಲು ಇರುವುದಾಗಿ ಹೇಳಿದರು. ಬಳಿಕ ಆಕೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಕಿಡ್ನಿ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಮಂಗಳವಾರ ರಾತ್ರಿ ಆಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಗಿ ಆಕೆಯ ಪತ್ರಿಕಾ ಪ್ರಚಾರಕ ವಿವರ ನೀಡಿದ್ದಾನೆ.

ಬಳಿಕ ಚೇತರಿಸಿಕೊಂಡ ಆಕೆ ಟ್ವಿಟ್ಟರ್‌ನಲ್ಲೂ ತನ್ನ ಚಿಕಿತ್ಸೆ ಬಗ್ಗೆ ಬರೆದು ಕೊಂಡಿದ್ದಾರೆ. ಈಗಲೂ ತಾವು ತಮ್ಮ ಮಾತಿಗೆ (ಬೆತ್ತಲಾಗುವ) ಬದ್ಧರಾ ಗಿರುವುದಾಗಿಯೂ ಒತ್ತಿ ಹೇಳಿದ್ದಾರೆ. ಅಂದಹಾಗೆ ಆಕೆ ಬರೆದಿರುವ ಸುದೀರ್ಘ ಪತ್ರಕ್ಕೆ ಬಿಸಿಸಿಐನಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಉತ್ತರಕ್ಕಾಗಿ ಇನ್ನೂ ಪೂನಂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಆಕೆಯ ಪರ ವಕೀಲ ಪ್ರಶಾಂತ್ ಉಚ್ಚಿಲ್ ತಿಳಿಸಿದ್ದಾರೆ.

Advertisements
Posted in: National News