ಎ.೮: ಡಾ| ಆಚಾರ್ಯ ನಿವಾಸದೆದುರು ರೈತ ಸಂಘದಿಂದ ಬಾರ ಕೋಲು ಚಳವಳಿ

Posted on April 7, 2011

0


ಪಡುಬಿದ್ರಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆಯಿಂದ ಡಾ| ವಿ.ಎಸ್ ಅಚಾರ್ಯ ಅವರನ್ನು ವಜಾ ಗೊಳಿಸಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸುವ ನಿಟ್ಟಿನಲ್ಲಿ ಉಡುಪಿಯ ಅವರ ನಿವಾಸದ ಎದುರು ಎ.೮ರಂದು ರೈತ ಸಂಘದಿಂದ ಬಾರಕೋಲು ಚಳವಳಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಅವರು ಪಡುಬಿದ್ರಿ ಬಿಲ್ಲವ ಸೇವಾ ಸಂಘದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಿವಾದಿತ ಯುಪಿಸಿಎಲ್ ಕಂಪನಿ ವಕ್ತಾರ ರಂತೆ ವರ್ತಿಸುತ್ತಿರುವ ಆಚಾರ್ಯರು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಜನರನ್ನೂ ಆವರು ವಿಶ್ವಾಸಕ್ಕೆ ತೆಗೆದುಕೊಳ್ಳು ವುದಲ್ಲ. ಯಾವುದೇ ನಿರ್ಣಯವನ್ನು ಅವರು ಏಕಪಕ್ಷೀಯವಾಗಿ ತೆಗೆದು ಕೊಳ್ಳುತ್ತಾರೆ. ಕಂಪೆನಿಯಲ್ಲಿ ಎಲ್ಲವೂ ಸರಿಯಾಗಿದೆ. ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಮುಖ್ಯಮಂತ್ರಿ ಯಡಿ ಯೂರಪ್ಪ ನವರಲ್ಲಿ ಹೇಳಿದ್ದಾರೆ. ಆದ್ದ ರಿಂದ ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಎ.೮ರ ಬೆಳಿಗ್ಗೆ ೧೦ಗಂಟೆಗೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿ ಸಾವಿರಾರು ಪ್ರತಿನಿಧಿಗಳು ಜೊತೆ ಗೂಡಿ ಮೆರವಣಿಗೆಯ ಮೂಲಕ ಅಚಾರ್ಯ ನಿವಾಸದವರೆಗೆ ಬಾರ ಕೋಲು ಚಳುವಳಿ ನಡೆಸಲಾಗುವುದು ಎಂದು ವಿಜಯ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಅದ ಮಾರು ಶಶಿಧರ ಶೆಟ್ಟಿ, ಜಿಲ್ಲಾ ವಕ್ತಾರ ಅಶೋಕ್ ಪೂಜಾರಿ, ಎರ್ಮಾಳು ಘಟ ಕದ ಉಪಾಧ್ಯಕ್ಷ ಬಾಲಚಂದ್ರ ಎರ್ಮಾಳು, ನಂದಿಕೂರು ಘಟಕದ ಸದಸ್ಯ ಐತಪ್ಪ ಪೂಜಾರಿ ಉಪಸ್ಥಿತರಿದ್ದರು.

Advertisements
Posted in: Udupi District