ಹೈಟೆಕ್ ವೇಶ್ಯಾವಾಟಿಕೆ: ಪಿಂಪ್ ಸಹಿತ ನಾಲ್ವರು ಪ ೊಲೀಸ್ ಬಲೆಗೆ

Posted on April 6, 2011

0


ಮಂಗಳೂರು: ಉರ್ವ ಠಾಣಾ ವ್ಯಾಪ್ತಿಯ ಫ್ಲ್ಯಾಟೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಯನ್ನು ಭೇದಿಸು ವಲ್ಲಿ ಯಶಸ್ವಿಯಾಗಿರುವ ಪೊಲೀಸರು ಪಿಂಪ್ ಸಹಿತ ನಾಲ್ವರನ್ನು ಸೆರೆ ಹಿಡಿದು ಜೈಲಿಗೆ ತಳ್ಳಿದ್ದಾರೆ.

ಬೋಳಿಯಾರು ಗ್ರಾಮದ ನಿವಾಸಿ ಸುಕೇಶ ಪೂಂಜಾ, ಬಿಜೈ ನಿವಾಸಿ ಸೋನಿ, ಚೊಕ್ಕಬೆಟ್ಟುವಿನ ಜ್ಯೋತಿ ಸಾಲ್ಯಾನ್, ಸುರತ್ಕಲ್ ಹೊನ್ನಕಟ್ಟೆಯ ಸಂಧ್ಯಾ ಎಂಬವರೇ ಬಂಧನಕ್ಕೊಳಗಾದವರಾ ಗಿದ್ದಾರೆ. ಮೂಲತಃ ತಮಿಳ್ನಾಡಿನ ನತ್ತುಪಟೇಲ್ ಎಂಬವರು ಮಂಗಳೂರು ಮತ್ತಿತರ ಜಿಲ್ಲೆಗಳಲ್ಲಿ ಮರದ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇವರ ಜೊತೆ ಬೋಳಿಯಾರಿನ ಸುಕೇಶ, ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ನತ್ತು ಪಟೇಲ್ ಮಂಗಳೂರಿಗೆ ಬಂದಾಗ ಉಳಿದುಕೊಳ್ಳಲೆಂದು ಅಶೋಕ ನಗರದಲ್ಲಿರುವ ಗೋಲ್ಡನ್ ಎಂಪೈರ್ ಹೆಸರಿನ ಫ್ಲ್ಯಾಟ್‌ನಲ್ಲಿ ಕೋಣೆ ಯೊಂದನ್ನು ಪಡೆದಿದ್ದು ಅದನ್ನು ಸುಕೇಶ್‌ನ ಸುಪರ್ದಿಯಲ್ಲಿ ಬಿಟ್ಟು ಕೊಟ್ಟಿದ್ದರು. ಆದರೆ ಇದನ್ನೇ ಅನೈತಿಕ ಚಟುವಟಿಕೆಯ ತಾಣ ಮಾಡಿಕೊಂಡ ಸುಕೇಶ ಮಹಿಳೆಯರು ಮತ್ತು ಯುವತಿಯರನ್ನು ಇಟ್ಟುಕೊಂಡು ಮಾಂಸ ದಂಧೆ ಮಾಡುತ್ತಿದ್ದನು ಎಂದು ಉರ್ವ ಠಾಣಾಧಿಕಾರಿ ಸುರೇಶ್ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಬಂಧಿತರಿಂದ ನಗದು ೨೦,೦೮೦ ಮತ್ತು ಐದು ಮೊಬೈಲ್‌ಗಳನ್ನು ವಶಪಡಿ ಸಿಕೊಳ್ಳಲಾಗಿದೆ. ಪಿಂಪ್ ಸುಕೇಶ ಬಿಜೆಪಿ ಯುವ ಮೋರ್ಚಾದಲ್ಲಿ ಪದಾಧಿಕಾರಿ ಎಂದೆಲ್ಲಾ ಹೇಳಿ ಕೊಂಡು ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ.

ಪೊಲೀಸರ ಹೊಸ ತಂತ್ರ

ಮಾಂಸದ ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿ ಎಸಿಪಿ ಗಡದಿ ಮತ್ತು ಉರ್ವ ಠಾಣಾಧಿಕಾರಿ ಸುರೇಶ್ ಅವರಿಗೆ ಲಭಿಸಿತ್ತು. ಆರೋಪಿಗಳ ಬಂಧನಕ್ಕೆ ಸಮಯ ನೋಡುತ್ತಿದ್ದ ಪೊಲೀಸರಿಗೆ ನಿನ್ನೆ ಖಚಿತ ಮಾಹಿತಿ ಲಭಿಸಿತ್ತು. ಪೊಲೀಸ್ ಗೆಟಪ್‌ನಲ್ಲಿ ಹೋದರೆ ಆರೋಪಿಗಳು ತಮ್ಮ ಕೈಗೆ ಸಿಗುವುದಿಲ್ಲ ಎಂದು ಅರಿತಿದ್ದ ಸುರೇಶ್ ಅವರು ಸಂಧ್ಯಾಳ ಮೊಬೈಲ್ ನಂಬರನ್ನು ಸಂಗ್ರಹಿಸಿ ಗಿರಾಕಿಗಳಂತೆ ನಂಬಿಸಿ ಆಕೆಯಿಂದಲೇ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಬಳಿಕ ಎಸಿಪಿ ಸಾಹೇಬರ ಜೊತೆ ಸುರೇಶ್ ಅವರೂ ಸಿವಿಲ್ ಡ್ರೆಸ್‌ನಲ್ಲಿ ಸಿಬ್ಬಂದಿ ಜೊತೆ ಇನ್ನೋವಾ ಕಾರಿನಲ್ಲಿ ನೇರವಾಗಿ ಆರೋಪಿಗಳು ಉಳಿದಿದ್ದ ಫ್ಲ್ಯಾಟ್‌ನ ಐದನೇ ಮಳಿಗೆಯ ರೂಂ ನಂಬ್ರ ೫೦೪ಕ್ಕೆ ಹೋಗಿದ್ದರು.

ಅದಾಗಲೇ ಐಷಾರಾಮಿ ಕಾರಿನಲ್ಲಿ ಬಂದ ಹೊಸ ಗಿರಾಕಿಗಳನ್ನು ಕಂಡು ಪುಳಕಿತರಾಗಿದ್ದ ಆರೋಪಿಗಳು ಅತಿಥಿಗಳನ್ನು ಒಳ ಕರೆದುಕೊಂಡು ಹೋಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲು ಕಂಬಿ ಎಣಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ವೇಶ್ಯಾವಾಟಿಕೆಯನ್ನು ರೆಡ್‌ಹ್ಯಾಂಡಾಗಿ ಪತ್ತೆ ಹಚ್ಚಿದ್ದಾರೆ.

ಶೋಕಿಗಾಗಿ ಈ ದಂಧೆಗೆ ಇಳಿದವರು!

ಬಂಧಿತರ ಪೈಕಿ ಸೋನಿ ಬಿಜೈ ನಿವಾಸಿಯಾಗಿದ್ದು ಅಂತಾರಾಷ್ಟ್ರೀಯ ಬ್ಯಾಂಕೊಂದರಲ್ಲಿ ವಿಮೆ ವಿಭಾಗದಲ್ಲಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ, ಸಂಧ್ಯಾ ಸುರತ್ಕಲ್ ಮತ್ತು ಜ್ಯೋತಿ ಚೊಕ್ಕಬೆಟ್ಟು ನಿವಾಸಿಯಾ ಗಿದ್ದಾಳೆ. ಜ್ಯೋತಿಗೆ ಮೂವರು ಪ್ರಾಯಕ್ಕೆ ಬಂದ ಮಕ್ಕಳಿದ್ದು ಆರ್ಥಿಕ ಸಮಸ್ಯೆಯಿಂದ ಅನೈತಿಕ ಕೆಲಸಕ್ಕೆ ಇಳಿದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಇನ್ನಿತರ ಇಬ್ಬರೂ ಶೋಕಿಗಾಗಿ ಮಾಂಸದಂಧೆಯಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ. ಸಂಧ್ಯಾ ಉರ್ವ ಮಾರಿಗುಡಿ ಜಾತ್ರೆಯ ಸಂದರ್ಭದಲ್ಲಿ ಐಶಾರಾಮಿ ಮೊಬೈಲ್ ಮತ್ತು ವಸ್ತ್ರಗಳನ್ನು ತೊಟ್ಟು ಓಡಾಡುವಾಗಲೇ ಪೊಲೀಸರಿಗೆ ಆಕೆಯ ಮೇಲೆ ಅನುಮಾನ ಬಂದಿತ್ತೆನ್ನಲಾಗಿದೆ. ಅಲ್ಲದೆ ಕೆಲವು ಸಮಯಗಳ ಹಿಂದೆ ಚಿಲಿಂಬಿಯಲ್ಲಿ ಇಂತಹದ್ದೇ ಪ್ರಕರಣದಲ್ಲಿ ಈಕೆ ಆರೋಪಿಯಾಗಿದ್ದು ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಇದುವರೆಗೆ ನಗರದಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಹೊರ ರಾಜ್ಯದ ವರೇ ಭಾಗಿಯಾಗಿದ್ದರೆ, ನಿನ್ನೆಯ ದಾಳಿಯಲ್ಲಿ ನಗರದ ಆಸುಪಾಸಿನವರೇ ಸೆರೆ ಸಿಕ್ಕಿದ್ದಾರೆ.

Posted in: Crime News