ಹೇಳಿಕೆಯನ್ನು ಅಪಾರ್ಥ ಮಾಡಲಾಯಿತು: ಅಫ್ರಿದಿ

Posted on April 6, 2011

0


ನವದೆಹಲಿ: ಭಾರತೀ ಯರ ಬಗ್ಗೆ ನಾನು ವ್ಯಕ್ತಪಡಿ ಸಿದ ಅಭಿಪ್ರಾಯವನ್ನು ಮಾಧ್ಯ ಮಗಳು ಅಪಾರ್ಥ ಮಾಡಿ ಇಡೀ ಹೇಳಿಕೆಯನ್ನು ದೊಡ್ಡ ದಾಗಿ ಮಾಡಲಾಯಿತು ಎಂದು ಪಾಕಿಸ್ತಾನ ಕಪ್ತಾನ ಶಹೀದ್ ಅಫ್ರಿದಿ ಖೇದ ವ್ಯಕ್ತಪಡಿಸಿದ್ದಾರೆ.

ಎರಡೂ ರಾಷ್ಟ್ರಗಳ ಸಂಬಂಧ ಸುಧಾರಣೆಗಾಗಿ ನಾನು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ಈ ಹೇಳಿಕೆಯನ್ನು ನೀಡಿದ್ದೆ. ಆದರೆ ನನ್ನ ಹೇಳಿಕೆಯನ್ನೇ ವಿವಾದವನ್ನಾಗಿ ಮಾಡಲಾಗಿದೆ. ನನ್ನ ಮಾತನ್ನು ನಕಾರಾ ತ್ಮಕವಾಗಿ ಚಿತ್ರಿಸಬೇಡಿ, ಮುಖ್ಯವಾಗಿ ಎರಡು ರಾಷ್ಟ್ರಗಳ ವಿಷಯಗಳಲ್ಲಿ ಇಂತಹ ವಿವಾದವನ್ನು ಸೃಷ್ಟಿಸುವ ಪ್ರಮೇಯಕ್ಕೆ ಹೋಗಬಾರದು. ಭಾರತದಲ್ಲಿ ಕಳೆದ ೧೪ ವರ್ಷಗಳಿಂದ ಆಡಿದ್ದು ಹೆಚ್ಚಿನ ಸಂತೋಷವನ್ನು ಪಡೆದಿದ್ದೇನೆ ಎಂದು ಅಫ್ರಿದಿ ತಿಳಿಸಿದ್ದಾರೆ.

ಭಾರತೀಯರು ಪಾಕಿಸ್ತಾನಿಯರಂತೆ ವಿಶಾಲ ಹೃದಯ ವನ್ನು ಹೊಂದಿಲ್ಲ ಎಂದು ಅಫ್ರಿದಿ ಈ ಹಿಂದೆ ಹೇಳಿಕೆ ನೀಡಿದ್ದರು.

Posted in: Sports News