ವಿಶ್ವಕಪ್ ಗೆದ್ದವರಿಗೆ ‘ಕಿಂಗ್ಫಿಶರ್ ಕೊಡುಗೆ

Posted on April 6, 2011

0


ನವದೆಹಲಿ: ವಿಶ್ವಕಪ್ ಗೆದ್ದ ನಂತರ ತಂಡದ ಆಟಗಾರರಿಗೆ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿದ್ದು ಈಗ ಕಿಂಗ್‌ಫಿಶರ್ ಏರ್‌ಲೈನ್ ವತಿಯಿಂದ ಕಪ್ ಗೆದ್ದ ಎಲ್ಲಾ ೧೫ ಆಟಗಾರರಿಗೆ ಜೀವನ ಪರ್ಯಂತ ವಿಮಾನದಲ್ಲಿ ಪ್ರಥಮ ದರ್ಜೆಯಲ್ಲಿ ಉಚಿತವಾಗಿ ಪ್ರಯಾಣಿಸುವ ಕೊಡುಗೆಯನ್ನು ನೀಡಿದೆ.

ಎಲ್ಲಾ ೧೫ ಆಟಗಾರರೊಂದಿಗೆ ಅವರ ಪತ್ನಿ ಹಾಗೂ ಮಕ್ಕಳೂ ಕೂಡ ಇದಕ್ಕೆ ಒಳಪಡಲಿದ್ದು ತಾವು ಸಾಗುವ ಎಲ್ಲಾ ಜಾಲಗಳಲ್ಲಿ ಇದು ಅನ್ವಯಿಸಲಿದೆ ಎಂದು ಏರ್‌ಲೈನ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Posted in: Sports News