ವಿದಾಯ ಕಠಿಣ ನಿರ್ಧಾರ: ಕರ್ಸ್ಟನ್

Posted on April 6, 2011

0


ಮುಂಬೈ: ಕಳೆದ ಎರಡುವರೆ ವರ್ಷದಿಂದ ಭಾರತದ ಕೋಚ್ ಸ್ಥಾನದಲ್ಲಿದ್ದು ಈಗ ತಂಡವನ್ನು ಬಿಡುವ ನನ್ನ ನಿರ್ಧಾರವು ಅತ್ಯಂತ ಕಠಿಣತೆಯಿಂದ ಕೂಡಿತ್ತು ಎಂದು ತಂಡದ ನಿರ್ಗಮನ ಕೋಚ್ ಗ್ಯಾರಿ ಕರ್ಸ್ಟನ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಬಹಳ ನೋವಿನಿಂದ ಕೂಡಿದ ವಿದಾಯ. ಒಂದು ವಿಶೇಷತೆಯಿಂದ ಕೂಡಿದ ತಂಡದ ಕೋಚ್ ಆಗಿ ಕೆಲಸ ನಿರ್ವಹಿಸಿದ ಬಗ್ಗೆ ನನ್ನಲ್ಲಿ ಅಭಿಮಾನವಿದ್ದು ಈ ಹಿಂದೆ ಕೋಚ್ ಹುದ್ದೆ ನಿರ್ವಹಿಸದಿದ್ದರೂ ಕೆಲಸ ವನ್ನು ಪೂರ್ಣ ಮಾಡಿದ ಬಗ್ಗೆ ಸಂತೋಷವಿದೆ. ಕಪ್ ಗೆದ್ದ ತಂಡಕ್ಕೆ ಶುಭಾಶಯವನ್ನು ಸಲ್ಲಿಸುತ್ತಿದ್ದು ಆಟಗಾರರ ನೆರವಿಲ್ಲದೆ ಇದು ಸಾಧ್ಯವಿಲ್ಲವಾಗಿದ್ದು ಉತ್ತಮವಾದ ಸವಿನೆನಪಿನ ಘಟನೆಯನ್ನು ನಿರ್ಮಿಸಿಕೊಟ್ಟ ಆಟಗಾರರಿಗೆ ಧನ್ಯವಾದಗಳು ಎಂದು ಗ್ಯಾರಿ ತನ್ನ ವಿದಾಯ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

Posted in: Sports News