ರೈಲು ಢಿಕ್ಕಿ: ವಿದ್ಯಾರ್ಥಿನಿ ಬಲಿ

Posted on April 6, 2011

0


ಮಂಗಳೂರು: ತಾಯಿ ಹಾಗೂ ಸಹೋದರರೊಂದಿಗೆ ಹಳಿ ದಾಟುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾಸರಗೋಡಿನ ಮೊಗ್ರಾಲ್ ಪುತ್ತೂರು ಪಂಚಾಯತ್ ಬಳಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕಲ್ಲಂಗೈಯ ಮೊಹ್ದಿನ್ ಕುಂಞ ಎಂಬವರ ಪುತ್ರಿ ನೆಲ್ಲಿಕುಂಜೆ ಸರಕಾರಿ ಗರ್ಲ್ಸ್ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಶಂಸೀನಾ (೧೯) ಎಂದು ಗುರುತಿಸಲಾಗಿದೆ. ಪೆರಿಯಡ್ಕದ ತನ್ನ ದೊಡ್ಡಮ್ಮನ ಮನೆಗೆ ಹಿಂತಿರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ದುರ್ಘಟನೆ ನಡೆದ ಸ್ಥಳದಲ್ಲಿಯೇ ಸಂಸೀನಾ ಮೃತಪಟ್ಟಿದ್ದಾಳೆ.

Posted in: Crime News