ಯುವತಿಯರಿಗೆ ಕಿರುಕುಳ: ದೂರು

Posted on April 6, 2011

0


ಬಂಟ್ವಾಳ: ಗಂಡಸರು ಇಲ್ಲದ ವೇಳೆ ಮನೆಗೆ ಬಂದು ಅನೈತಿಕವಾಗಿ ನಡೆದು ಕೊಳ್ಳುವ ವ್ಯಕ್ತಿಯೋರ್ವ ಯುವತಿಯರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆ ಸಜೀಪ ಮುನ್ನೂರು ಗ್ರಾಮದ ಉದ್ದೋಟು ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ನಸೀಮಾ ಎಂಬವರು ಆರೋಪಿತ ವ್ಯಕ್ತಿಗ ಳಾದ ಎಸ್.ಎಂ. ಇಸ್ಮಾಯಿಲ್ ಹಾಗೂ ಮೊಹಮ್ಮದ್ ರಫೀಕ್ ವಿರುದ್ಧ ನಗರ ಠಾಣೆಗೆ ದೂರು ನೀಡಿದ್ದಾರೆ.

ಇಸ್ಮಾಯಿಲ್ ಈ ಹಿಂದೆಯೂ ತನ್ನ ನೆರೆಕರೆ ಮನೆಯ ಯುವತಿಯರಿಗೆ ಕಿರುಕುಳ ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಘಟನೆಗೆ ಸಂಬಂಧಿಸಿ ೫ ದಿನ ಕೋರ್ಟು ಆರೋಪಿಗೆ ನ್ಯಾಯಾಂಗ ಬಂಧನ ಕ್ಕೊಳಪಡಿಸಿತ್ತು. ಇದಾಗಿ ಎರಡು ತಿಂಗಳ ಬಳಿಕ ಆರೋಪಿ ಇಸ್ಮಾಯಿಲ್ ತನ್ನ ಸ್ನೇಹಿತನಾದ ರಫೀಕ್‌ನ ಜೊತೆಗೆ ಮನೆಗೆ ಹೋಗಿ ಅವಾಚ್ಯವಾಗಿ ನಡೆದುಕೊಂಡಿದ್ದ ಎನ್ನಲಾಗಿದೆ.

ಹೆಣ್ಮಕ್ಕಳ ಎದುರು ಅನೈತಿಕವಾಗಿ ನಡೆದುಕೊಳ್ಳುವ ಇಸ್ಮಾಯಿಲ್ ತನ್ನ ವರ್ತನೆಯ ಬಗ್ಗೆ ಗಂಡಸರಿಗೆ ತಿಳಿಸಿದರೆ ಬಿಡುವುದಿಲ್ಲ ಎಂದು ಬೆದರಿಕೆಯೂ ಹಾಕಿದ್ದು, ಅವಾಚ್ಯವಾಗಿ ಬೈದಿರುವುದಾಗಿ ನಸೀಮಾ ಠಾಣಾಧಿಕಾರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Posted in: Crime News