ಮಲ್ಪೆ ಬೀಚ್‌ನಲ್ಲಿ ಕಳ್ಳತನ

Posted on April 6, 2011

0


ಮಂಗಳೂರು: ಮಲ್ಪೆ ಬೀಚ್‌ನಲ್ಲಿ ನಿಲ್ಲಿಸಲಾಗಿದ್ದ ಮಾರುತಿ ವ್ಯಾನ್‌ನ ಲಾಕ್ ಒಡೆದು ೩೫ ಸಾವಿರ ರೂ. ಮೌಲ್ಯದ ಸೊತ್ತು ಕಳವುಗೈದ ಘಟನೆ ನಿನ್ನೆ ನಡೆದಿದೆ. ಕೊಡಗು ನಿವಾಸಿ ಮಂಜುನಾಥ ಬಿ.ಜೆ.(೩೩) ಎಂಬವರು ಕುಟುಂಬ ಸಮೇತ ವಿಹಾರಕ್ಕೆ ಆಗಮಿಸಿದ್ದು, ಬೀಚ್‌ಗೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ. ವ್ಯಾನ್ ಹಿಂಬದಿಯ ಡೋರ್ ಲಾಕ್ ಮುರಿಯಲಾಗಿದ್ದು, ಮೂರು ಮೊಬೈಲ್, ಒಂದು ಕ್ಯಾಮೆರಾ, ೬,೮೦೦ ರೂ. ನಗದು ಕಳವುಗೈಯಲಾಗಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವುದು ಮಾತ್ರವಲ್ಲದೆ ದರೋಡೆ, ಕಳ್ಳತನ, ಚುಡಾವಣೆ ಪ್ರಕರಣಗಳೂ ಸಾಮಾನ್ಯವಾಗಿದ್ದು, ಪೊಲೀಸರು ಇತ್ತ ಗಮನಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

Posted in: Crime News