ಬೆಂಗಳೂರಿನಿಂದ ಓಡಿಬಂದ ಅಪ್ರಾಪ್ತೆ

Posted on April 6, 2011

0


ಉಡುಪಿ: ಮನೆಮಂದಿಯ ಒತ್ತಾಯಕ್ಕೆ ಮಣಿದು ತನ್ನ ಮಾವನನ್ನು ಮದುವೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತನ ಕಿರು ಕುಳ ತಾಳಲಾರದೆ ಧರ್ಮಸ್ಥಳ ಬಳಿಕ ಕುಂದಾಪುರಕ್ಕೆ ಓಡಿಬಂದು ಅಲ್ಲಿನ ಮಹಿಳಾ ಸಂಘಟನೆಯ ವಶವಾಗಿರುವ ಬಗ್ಗೆ ವರದಿ ಯಾಗಿದೆ.

ಉಡುಪಿಯಲ್ಲಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ನಿನ್ನೆ ಪತ್ರಿಕಾ ಗೋಷ್ಠಿ ನಡೆಸಿರುವ ಅನ್ನಪೂರ್ಣ ವಿಷಯ ಬಹಿರಂಗಪಡಿಸಿದ್ದಾಳೆ

ಬೆಂಗಳೂರು ಜೆ.ಸಿ.ನಗರದ ಎಂ.ಬಿ. ಲಿಂಗರಾಜು ಮತ್ತು ರತ್ನಮ್ಮ ದಂಪತಿ ದ್ವಿತೀಯ ಪುತ್ರಿ ಅನ್ನಪೂರ್ಣಳಿಗೆ ಪ್ರಥಮ ಪಿಯುಸಿ ಕಲಿಯುತ್ತಿದ್ದಾಗಲೇ ೨೦೧೦ ಮಾ.೩ ರಂದು ತಾಯಿಯ ತಮ್ಮ ಬಿ.ಅನಂತ ಎಂಬಾತನಿಗೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಕೊಡಲಾಗಿತ್ತು. ಕಾರಣ ಬಿ.ಅನಂತ ತನ್ನ ಅಕ್ಕ ರತ್ನಮ್ಮಳಿಗೆ ಒಂದೂ ವರೆ ಲಕ್ಷ ರೂ ಹಣವನ್ನು ಆಪತ್ಕಾಲಕ್ಕೆ ನೀಡಿದ್ದ. ಅದನ್ನು ರತ್ನಮ್ಮ ಹಿಂತಿರುಗಿಸದ ಹಿನ್ನೆಲೆಯಲ್ಲಿ ಪೀಡಿಸ ತೊಡಗಿದ್ದ. ಅಲ್ಲದೇ ಹಣ ಕೊಡದಿದ್ದಲ್ಲಿ ಮಗಳನ್ನು ಮದುವೆ ಮಾಡಿಕೊಡಿ ಎಂದಿದ್ದ. ಅದರಂತೆ ಹೆತ್ತವರು ಈತನಿಗೆ ಮಗಳನ್ನು ಮದುವೆ ಮಾಡಿಸಿ ಕೊಟ್ಟಿದ್ದರು. ಅಪ್ರಾಪ್ತೆ ಅನ್ನಪೂರ್ಣ ಶ್ರೀಸಾಯಿ ಮಹಿಳಾ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸಿದ್ದಳು. ಸದಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಗಂಡ ಬಿ.ಅನಂತನ ಕಿರುಕುಳ ತಡೆಯಲಾರದೆ ತನ್ನ ದ್ವಿತೀಯ ಪಿಯುಸಿಯ ಕೊನೆ ಪರೀಕ್ಷೆಯನ್ನು ಮುಗಿಸಿ ಮನೆಬಿಟ್ಟು ಧರ್ಮಸ್ಥಳಕ್ಕೆಂದು ಬಂದಿದ್ದಳು. ಅಲ್ಲಿ ನಾಲ್ಕು ದಿನಗಳ ಕಾಲ ಉಳಿದು ಕುಂದಾಪುರದತ್ತ ಪ್ರಯಾಣ ಬೆಳೆಸಿದ್ದಳು. ಅಲ್ಲಿ ದಾರಿ ತಪ್ಪಿದಂತಾದ ಅನ್ನಪೂರ್ಣ ವೃದ್ಧರೊಬ್ಬರ ನೆರವಿನಿಂದ ತಾಲೂಕು ಮಹಿಳಾ ಫೆಡರೇಶನ್ ಅಧ್ಯಕ್ಷೆ ರಾಧಾದಾಸ್ ಎಂಬವರನ್ನು ಸಂಪರ್ಕಿಸಿ ಅನ್ನಪೂರ್ಣಳನ್ನು ಅವರ ವಶಕ್ಕೆ ಒಪ್ಪಿಸಿದ್ದರು. ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅನ್ನಪೂರ್ಣ ಗಂಡನ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಲು ಮುಂದಾ ಗಿದ್ದಾಳೆ. ಆದರೂ ಅನ್ನಪೂರ್ಣ ಕುಂದಾ ಪುರಕ್ಕೆ ಹೋಗಿರುವುದು ಯಾತಕ್ಕೆ ಎಂದು ತಿಳಿದುಬಂದಿಲ್ಲ.

Posted in: Udupi District