ಪಹರೆದಾರನ ಶವ ರೈಲು ಹಳಿಯಲ್ಲಿ ಪತ್ತೆ

Posted on April 6, 2011

0


ಮಂಗಳೂರು: ಕಳೆದ ಕೆಲವು ಸಮಯಗಳಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪಹರೇದಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ವ್ಯಕ್ತಿಯ ಮೃತದೇಹ ನಿನ್ನೆ ಬೈಕಂಪಾಡಿ ಸೇತುವೆ ಬಳಿಯ ರೈಲು ಹಳಿಯಲ್ಲಿ ಪತ್ತೆಯಾಗಿದೆ.

ಮೃತನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಈತ ಜೀವನದಲ್ಲಿ ಜಿಗು ಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಚಲಿಸುತ್ತಿದ್ದ ರೈಲಿನಡಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟನೇ ಎನ್ನುವ ಸಂಶಯವೂ ಸ್ಥಳೀಯರನ್ನು ಕಾಡತೊಡಗಿದೆ. ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Posted in: Crime News