ತೈಲ ಕಳ್ಳತನ: ಮುಂದುವರಿದ ತನಿಖೆ

Posted on April 6, 2011

0


ಮಂಗಳೂರು: ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಸಮೀಪದ ಕೆರ್ಚೇಲಿಯಲ್ಲಿ ನಡೆದ ತೈಲಕಳ್ಳತನ ಪ್ರಕರಣದ ತನಿಖೆ ಮುಂದುವರಿದಿದೆ.

ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಿಚಾರಿಸಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಪೈಪ್‌ಲೈನ್‌ನ ಅಂತ್ಯ ತಾಣ ಕಂಡು ಬಂದ ಮನೆಯವರು ಪೈಪ್ ಖರೀಧಿಸಿ ತಂದುವನ್ನು ನೋಡಿದವರಿದ್ದಾರೆ. ಸುಮಾರು ೬೦ ಸಾವಿರ ರೂ.ಗಳ ಪೈಪನ್ನು ಖರೀಧಿಸಲಾಗಿದೆ ಎನ್ನಲಾಗುತ್ತಿದ್ದು, ಒಂದೂವರೆ ಕಿ.ಮೀ.ನಷ್ಟು ದೂರ ಕಾಡಿನ ದಾರಿಯಲ್ಲಿ ಪೈಪ್ ಅಳವಡಿಸಲಾಗಿತ್ತು. ಮನೆಯ ಸಮೀಪ ಪೈಪ್‌ಲೈನ್ ಇಟ್ಟು ಗೇಟ್‌ವಾಲ್ವ್ ಮೂಲಕ ತೈಲ ಭರಿಸಿ ತುಂಬಿಸಲಾಗುತ್ತಿತ್ತು. ಡೀಸೆಲ್ ಅಥವಾ ಸೀಮೆಎಣ್ಣೆ ತುಂಬಿದ ಖಾಲಿ ಟ್ಯಾಂಕರ್ ಬರಬೇಕಾದ ಸಂದರ್ಭವೂ ಈ ರಸ್ತೆ ಮುಖಾಂತರ ಲೋಡಿನ ವಾಹನ ಬಂದು ರಸ್ತೆಯಲ್ಲಿ ಒದ್ದಾಡಿದ್ದನ್ನು ನೋಡಿದವರಿದ್ದಾರೆ. ಪ್ರಕರಣದ ಬಗ್ಗೆ ಮಹತ್ವದ ಸುಳಿವು ದೊರೆತ್ತಿದೆ ಎನ್ನಲಾಗಿದೆ.

Posted in: Crime News