ಕೊಲೆ ಯತ್ನ ಆರೋಪಿಗೆ ನ್ಯಾಯಾಂಗ ಬಂಧನ

Posted on April 6, 2011

0


ಮಂಗಳೂರು: ಉಪ್ಪಿನಂಗಡಿ ಸಮೀಪದ ಬಜತ್ತೂರು ಎಂಬಲ್ಲಿ ತಡರಾತ್ರಿ ಟಿ.ವಿ.ನೋಡಿದ್ದಕ್ಕೆ ಆಕ್ಷೇಪಿಸಿದಕ್ಕಾಗಿ ತನ್ನ ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರನ್ನು ಕತ್ತಿಯಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯೊಬ್ಬನನ್ನು ಸೋಮವಾರದಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ದಯಾನಂದ(೧೮) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ೨೬ ರಂದು ರಾತ್ರಿ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಎ.೧೯ ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Posted in: Crime News