‘ಎತ್ತಿಕೊಳ್ಳುವುದು ಪೂರ್ವ ನಿರ್ಧರಿತ: ಹರ್ಭಜನ್

Posted on April 6, 2011

0


ಜಲಂಧರ್: ವಿಶ್ವಕಪ್ ಫೈನಲ್‌ನಲ್ಲಿ ಜಯ ಸಾಧಿಸಿದ್ದರ ನಂತರ ಸಚಿನ್ ತೆಂಡುಲ್ಕರ್‌ರನ್ನು ಹೆಗಲಿನ ಮೇಲೆ ಹೊತ್ತುಕೊಂಡು ಮೈದಾನ ಸುತ್ತುವ ಆಟಗಾರರ ನಿಲುವು ಪೂರ್ವ ನಿರ್ಧರಿ ತವಾಗಿದ್ದರೂ ಈ ಬಗ್ಗೆ ಸಚಿನ್‌ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಫೈನಲ್‌ನಲ್ಲಿ ನಾವು ಜಯ ಸಾಧಿಸಿದರೆ ಸಚಿನ್‌ರನ್ನು ಹೆಗಲಿನಲ್ಲಿ ಹೊತ್ತುಕೊಂಡು ಮೈದಾನಕ್ಕೆ ಪ್ರದಕ್ಷಿಣೆ ಹಾಕುವ ಬಗ್ಗೆ ನಾವು ಮೊದಲೇ ನಿರ್ಧರಿಸಿಕೊಂಡಿದ್ದೆವು ಮತ್ತು ನಾವು ಆ ರೀತಿ ಮಾಡಿದೆವು ಎಂದು ಹರ್ಭಜನ್ ತಿಳಿಸಿದರು.

Advertisements
Posted in: Sports News