ಹದಿನೈದು ದಿನಗಳಲ್ಲಿ ವಿಶ್ವಕಪ್ ಕ್ರೀಡಾಳುಗಳಿ ಗೆ ಬಿಡಿಎ ಸೈಟ್

Posted on April 6, 2011

0


ಬೆಂಗಳೂರು: ವಿಶ್ವ ಕಪ್ ಕ್ರಿಕೆಟ್ ಗೆದ್ದ ಕ್ರೀಡಾಳುಗಳು ಮತ್ತು ಕೋಚ್‌ಗಳಿಗೆ ಇನ್ನು ಹದಿನೈದು ದಿನಗಳಲ್ಲಿ ಬಿಡಿಎ ನಿವೇಶನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಇಂದು ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ಕರೆಯಲಾಗಿದ್ದ ತುರ್ತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಎದ್ದ ವಿವಾದದ ಕುರಿತು ಉತ್ತರಿಸಿ,ಸರ್ಕಾರದ ತೀರ್ಮಾನವನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದರು. ರಾಷ್ಟ್ರಕ್ಕೆ ಅತ್ಯಂತ ಗೌರವ ತಂದುಕೊಟ್ಟ ಕ್ರೀಡಾಪಟುಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯ.ಇವರಿಗೆ ಕ್ರೀಡಾ ಕೋಟಾದಲ್ಲಿ ನಿವೇಶನಗಳನ್ನು ನೀಡುತ್ತೇವೆ ಎಂದು ನುಡಿದರು. ಇನ್ನು ಹದಿನೈದು ದಿನಗಳಲ್ಲಿ ಪ್ರತ್ಯೇಕ ಬಡಾವಣೆ ನಿರ್ಮಿಸಿ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದರು.

Advertisements
Posted in: State News