ಸಾಯಿಬಾಬಾ ಆರೋಗ್ಯ ಸುಧಾರಣೆ

Posted on April 6, 2011

0


ಮಂಗಳೂರು: ಸತ್ಯಸಾಯಿ ಬಾಬಾ ಅವರ ಆರೋಗ್ಯ ಸುಧಾರಣೆ ಕಂಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಬಾ ಆರೋಗ್ಯ ತಿಳಿಯುವ ಕುತೂಹಲದಿಂದ ದೇಶದ ನಾನಾ ಭಾಗಗಳಿಂದ ಜನರು ಆಗಮಿಸುತ್ತಿದ್ದಾರೆ. ಪೊಲೀಸರು ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಶ್ವಾಸಕೋಶ ಮತ್ತು ಕಿಡ್ನಿ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ೮೫ ವರ್ಷದ ಬಾಬಾ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈ ನಡುವೆ ಬಾಬಾ ಅವರ ಆರೋಗ್ಯ ಕಳವಳಕಾರಿಯಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಪುಟ್ಟಪರ್ತಿಗೆ ಬರುತ್ತಿದ್ದಾರೆ. ಪೊಲೀಸರು ಲಾಠಿಚಾರ್ಜ್ ನಡೆಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಶ್ರಮಿಸುತ್ತಿದ್ದಾರೆ. ಬಾಬಾ ಆರೋಗ್ಯ ಸ್ಥಿರವಾಗುವ ಮುನ್ನ ಭಕ್ತರನ್ನು ಪುಟ್ಟಪರ್ತಿಗೆ ಬರದಂತೆ ಆಂದ್ರಪ್ರದೇಶ ಸರಕಾರ ವಿನಂತಿಸಿದೆ.

Advertisements