ಸರ್ಕಾರಿ ಭೂಮಿ ಅತಿಕ್ರಮಣ: ತೆರವು ಕಾರ್ಯಾಚರಣೆ ಆರಂಭ

Posted on April 6, 2011

0


ಪುತ್ತೂರು: ಪುತ್ತೂರು ತಾಲೂಕಿ ನಲ್ಲಿ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿ ರುವ ೧೦೦ಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಿರುವ ಕಂದಾಯ ಇಲಾ ಖಾಧಿಕಾರಿಗಳು, ಒತ್ತುವರಿ ಭೂಮಿ ಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ. ಮಾತ್ರವಲ್ಲದೆ ಸರ್ಕಾರಿ ಭೂಮಿಯನ್ನು ಅನಧಿಕೃತ ವಾಗಿ ಒತ್ತುವರಿ ಮಾಡಿ ಕೊಂಡಿ ರುವ ವರ ವಿರುದ್ದ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ..

ಸರ್ಕಾರಿ ಭೂಮಿಯಲ್ಲಿನ ಒತ್ತು ವರಿಯನ್ನು ತೆರವುಗೊಳಿಸುವ ಉದ್ದೇಶ ದಿಂದ ಸರ್ಕಾರವು ಕರ್ನಾಟಕ ಭೂ ಕಂದಾಯ ಮಸೂದೆಗೆ ತಿದ್ದು ಪಡಿ ಯನ್ನು ತಂದಿದ್ದು, ಈ ಹಿನ್ನಲೆ ಯಲ್ಲಿ ತಹಶೀಲ್ದಾರ್ ಡಾ.ದಾಸೇ ಗೌಡ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಸರ್ಕಾರಿ ಭೂಮಿ ಅತಿಕ್ರಮಣದ ತೆರವು ಕಾರ್ಯಾಚರಣೆ ಪ್ರಕ್ರಿಯೆ ಆರಂಬಿ ಸಿದ್ದಾರೆ.

Advertisements