ಸಂತ್ರಸ್ತರೂ ಬೀದಿ ಪಾಲಾದರೂ ಆಟಗಾರರಿಗೆ ಬಿಡಿಎ ಸೈಟು: ಮುನೀರ್

Posted on April 6, 2011

0


ಮಂಗಳೂರು: ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ರಾತ್ರೋ ರಾತ್ರಿ ಬಿಡಿಎ ಸೈಟು ನೀಡಲು ಮುಂ ದಾಗಿರುವ ಮುಖ್ಯಮಂತ್ರಿ ಯಡಿ ಯೂರಪ್ಪನವರು ರಾಜ್ಯದ ನೆರೆ ಸಂತ್ರಸ್ತ, ನಿವೇಶನ ರಹಿತ ಬಡವರು ವರ್ಷ ಗಳಿಂದ ಬೀದಿ ಪಾಲಾಗುತ್ತಿದ್ದರೂ ಯಾವುದೇ ಕಾಳಜಿ ವಹಿಸದೇ ಇರು ವುದು ಪ್ರಜಾಪ್ರಭುತ್ವದ ಅಣಕ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿ ಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿವೈಎಫ್‌ಐ ಪಿಲಾರು ಮತ್ತು ಕುಂಪಲ ಘಟಕಗಳು ಸೋಮೇಶ್ವರ ಪಂಚಾಯತ್ ಮುಂಭಾಗ ಆಯೋಜಿ ಸಿದ್ದ ಸೋಮೇಶ್ವರ ಪಂಚಾಯತ್ ಚಲೋ ಮತ್ತು ನಿವೇಶನ ರಹಿತರಿಂದ ಸಾಮೂಹಿಕ ಅರ್ಜಿ ಸಲ್ಲಿಕೆ ಕಾರ್ಯ ಕ್ರಮವನ್ನು ಉದ್ದೇಶಿಸಿ ಅವರು ಮಾತ ನಾಡುತ್ತಿದ್ದರು.

ಆರಂಭದಲ್ಲಿ ಕೊಲ್ಯ ನಾರಾಯಣ ಗುರು ಮಂದಿರದ ಬಳಿಯಿಂದ ಪಂಚಾ ಯತ್ ಕಚೇರಿಯವರೆಗೆ ನಡೆದ ಪ್ರತಿ ಭಟನಾ ರ‍್ಯಾಲಿಯಲ್ಲಿ ಮಹಿಳೆ ಯರೂ ಸೇರಿ ನೂರಾರು ನಿವೇಶನ ರಹಿತರು ಪಾಲ್ಗೊಂಡಿದ್ದರು. ಸೋಮೇಶ್ವರ ಪಂಚಾಯತ್ ವ್ಯಾಪ್ತಿಯ ನಾಲ್ಕು ನೂರಕ್ಕೂ ಅಧಿಕ ನಿವೇಶನ ರಹಿತರ ಅರ್ಜಿಗಳನ್ನು ಸ್ಥಳೀಯ ಪಂಚಾಯತ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸ ಲಾಯಿತು.

Advertisements