ಶ್ರೀಭೂತನಾಥೇಶ್ವರ ಹಳ್ಳಿ ಕಬಡ್ಡಿ ಪಂದ್ಯಾಟ

Posted on April 6, 2011

0


ಮಂಗಳೂರು: ತಾಲೂಕಿನ ಮಿಜಾರು ಸನಿಹದ ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಜನಾ ಮಂಡಳಿಯ ಜಂಟಿ ಆಶ್ರಯದಲ್ಲಿ ವಿಜಯನಾಥ ವಿಠಲ ಶೆಟ್ಟಿ ಅವರ ಸಾರಥ್ಯದಲ್ಲಿ ಇದೇ ಏಪ್ರಿಲ್ ೨೨ರಿಂದ ೨೪ರವರೆಗೆ ದೇವಳದ ವಠಾರದಲ್ಲಿ ಹಮ್ಮಿಕೊಳ್ಳಲಾಗಿರುವ ಹಳ್ಳಿ ಕಬಡ್ಡಿ ಪಂದ್ಯಾಟಕ್ಕಾಗಿ ಈಗಾ ಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ.

ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಲಿದ್ದು, ಹಳ್ಳಿ ತಂಡಗಳಿಗೆ ಮಾತ್ರ ಈ ಪಂದ್ಯಾವಳಿಯಲ್ಲಿ ಭಾಗ ವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೆಸರಿಸಲ್ಪಟ್ಟ ಹಳ್ಳಿ ತಂಡದ ಆಟಗಾರ, ಅದೇ ಹಳ್ಳಿಯ ನಿವಾಸಿಯಾಗಿದ್ದು, ಈ ಸಂಬಂಧ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢೀಕರಣವನ್ನು ಪಡೆದುಕೊಳ್ಳಬೇಕು. ಈಗಾಗಲೇ ದೇವಳದಲ್ಲಿ ಪ್ರವೇಶಪತ್ರಗಳು ಲಭ್ಯವಿದ್ದು, ಹಲವು ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿವೆ. ಪ್ರವೇಶಪತ್ರ ಸಲ್ಲಿಕೆಗೆ ಏ.೧೦ ಕೊನೆಯ ದಿನಾಂಕವಾಗಿರುತ್ತದೆ. ಯಾವುದೇ ಧರ್ಮ, ಜಾತಿ, ವರ್ಗಗಳ ಜನರು ಈ ಪಂದ್ಯಾಟದಲ್ಲಿ ಭಾಗವಹಿ ಸಲು ಅವಕಾಶವಿದ್ದು, ಆಟಗಾರರಿಗೆ ನಿರ್ದಿಷ್ಟ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ. ಪುರುಷ ಆಟಗಾರರ ಬಿಳಿ ಮುಂಡಿನ ಕಚ್ಚೆ ಹಾಗೂ ತಲೆಗೆ ಮುಂಡಾಸು ಧರಿಸಬೇಕು. ಮಹಿಳಾ ಆಟಗಾರರಿಗೆ ಸಲ್ವಾರ್ ಕಡ್ಡಾಯ. ಪ್ರತೀ ತಂಡವು ೭+೫ ಆಟಗಾರರನ್ನು ಹೊಂದಿದ್ದು, ಪ್ರತೀ ತಂಡಕ್ಕೆ ಪ್ರವೇಶ ಶುಲ್ಕ ೨೫೦ ರೂಪಾಯಿಗಳು. ಎರಡೂ ವಿಭಾಗ ಗಳಲ್ಲಿ ವಿಜೇತರಿಗೆ ಶ್ರೀ ಭೂತನಾಥೇಶ್ವರ ಟ್ರೋಫಿಯೊಂದಿಗೆ ಅತ್ಯಾಕರ್ಷಕ ನಗದು ಬಹುಮಾನ ಲಭಿಸಲಿದೆ. ಪ್ರಥಮ ಸ್ಥಾನಿ ತಂಡಕ್ಕೆ ರೂ. ೫೦,೦೦೦, ದ್ವಿತೀಯ ಸ್ಥಾನಿ ತಂಡಕ್ಕೆ ರೂ.೨೫,೦೦೦, ತೃತೀಯ ಸ್ಥಾನಿ ತಂಡಕ್ಕೆ ರೂ.೧೦,೦೦೦ ಹಾಗೂ ಚತುರ್ಥ ಸ್ಥಾನಿ ತಂಡಕ್ಕೆ ರೂ.೫೦೦೦ ನಗದು ಬಹುಮಾನವನ್ನು ನೀಡಲಾಗು ವುದು. ಅಲ್ಲದೆ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಅತ್ಯುತ್ತಮ ಸವ್ಯಸಾಚಿಗೆ ತಲಾ ೨,೫೦೦ ರೂಪಾ ಯಿಗಳ ವಿಶೇಷ ನಗದು ಪುರಸ್ಕಾರವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಳ ಅಗತ್ಯವಿದ್ದಲ್ಲಿ ರಾಧಾಕೃಷ್ಣ ೯೯೦೨೯೬೫೨೩೮ ಹಾಗೂ ಸಂದೇಶ ಶೆಟ್ಟಿ ೯೯೪೫೪೨೪೩೦೦ ಇವರನ್ನು ಸಂಪರ್ಕಿಸಬಹುದಾಗಿದೆ.

Advertisements