ವಿದ್ಯುತ್ ಸಂಪರ್ಕ ಕಡಿತ: ಜೀವ ಬೆದರಿಕೆ

Posted on April 6, 2011

0


ಮಂಗಳೂರು: ಕುಂದಾಪುರ ತಾಲೂಕಿನ ಬೈಂದೂರು ಮಹಿಳೆಯೊಬ್ಬರು ನಿರ್ಮಿಸುತ್ತಿದ್ದ ಮನೆಯೊಂದಕ್ಕೆ ಐವರು ಅಕ್ರಮ ಪ್ರವೇಶಗೈದು ತಾತ್ಕಾಲಿಕವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿ ಜೀವಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಬೈಂದೂರಿನ ಕಾರಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿದ್ದ ಮನೆಗೆ ವೆಂಕಪ್ಪ ಪೂಜಾರಿ, ರಾಜು ಪೂಜಾರಿ ಮತ್ತು ಮೂವರು ಮನೆಗೆ ನುಗ್ಗಿ ವಿದ್ಯುತ್ ಸಂಪರ್ಕ ಕಡಿದು ಹಾಕಿದ್ದರಲ್ಲದೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಸಾವಿತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisements
Posted in: Crime News