ರಾಜ್ಯದ ಹಣಕಾಸು ಪರಿಸ್ಥಿತಿ ಸುಭದ್ರ : ಸಿ.ಎಂ.

Posted on April 6, 2011

0


ಬೆಂಗಳೂರು: ರಾಜ್ಯದ ಹಣಕಾಸಿನ ಪರಿಸ್ಥಿತಿ ಸುಭದ್ರವಾಗಿದೆ ಎಂದು ಅಂಕಿ ಅಂಶಗಳ ಮೂಲಕ ಸಮರ್ಥಿಸಿಕೊಂ ಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರ ಶಕ್ತಿಯನುಸಾರ ಅಭಿವೃದ್ಧಿ ಕಾರ್ಯಗಳಿಗೆ ಸಾಲ ಮಾಡುವುದಾಗಿ ಹೇಳಿದ್ದಾರೆ.

ಹಣಕಾಸು ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳ ರಾಜ್ಯದ ಆರ್ಥಿಕ ಪರಿಸ್ಥಿತಿಯ ವಿವರವನ್ನು ಅಂಕಿ ಅಂಶಗಳ ಸಮೇತ ನೀಡಿದ ಅವರು,ಆರ್ಥಿಕ ಆಯೋಗ ನೀಡಿದ ಸಲಹೆಯಂತೆ ರಾಜ್ಯವನ್ನು ದಿವಾಳಿಯಾಗದಂತೆ ನೋಡಿಕೊಂಡೇ ಸಾಲ ಮಾಡುವುದಾಗಿ ನುಡಿದರು.

ವರ್ಷದಿಂದ ವರ್ಷಕ್ಕೆ ರಾಜ್ಯದ ಯೋಜನಾ ಗಾತ್ರ ಹೆಚ್ಚುತ್ತಿರುವುದರ ಜತೆಗೆ ಸಂಪನ್ಮೂಲ ಸಂಗ್ರಹದಲ್ಲೂ ನೆರೆ ಹೊರೆ ರಾಜ್ಯಗಳಿಗಿಂತ ನಾವು ಮುಂದಿದ್ದೇವೆ ಎಂದು ಸ್ಪಷ್ಟ ಪಡಿಸಿದರು. ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ೧೮೭೨ ಕೋಟಿ ರೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ನುಡಿದರು. ಒಟ್ಟಾರೆ ಕಳೆದ ವರ್ಷ ೩೮,೦೪೯ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದ ಅವರು,ನಾವು ನಿಗದಿ ಮಾಡಿದ ೩೬,೨೨೮ ಕೋಟಿ ರೂಗಳಿಗೆ ಹೋಲಿಸಿದರೆ ಇದು ಹೆಚ್ಚು ಎಂದು ವಿವರಿಸಿದರು. ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದಲೇ ೨೨,೭೫೦, ಅಬ್ಕಾರಿಯಿಂದ ೮೨೭೫,ನೋಂದಣಿ ಮತ್ತು ಮುದ್ರಾಂಕದಿಂದ ೩,೭೭೫., ಮೋಟಾರು ವಾಹನ ತೆರಿಗೆ ೨,೬೦೦ ಕೋಟಿ ರೂ ನಿಗದಿ ಮಾಡಲಾಗಿತ್ತು. ಆದರೆ ನಾವು ಯಾವ್ಯಾವ ಬಾಬಿಗೆ ಎಷ್ಟೆಷ್ಟು ತೆರಿಗೆ ನಿಗದಿ ಮಾಡಿ ದ್ದೆವೋ? ಅದಕ್ಕಿಂತ ಹೆಚ್ಚು ಎಂದರು. ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ನಾವು ಶೇಕಡಾ ೨೭ ರಷ್ಟು ಬೆಳವಣಿಗೆ ಕಂಡಿ ದ್ದರೆ, ಮಹಾರಾಷ್ಟ್ರದಲ್ಲಿ ಶೇಕಡಾ ೨೫,ತಮಿಳುನಾಡು ಶೇಕಡಾ ೨೬,ಆಂಧ್ರ ಮತ್ತು ಕೇರಳದಲ್ಲಿ ಶೇಕಡಾ ೨೩ ರಷ್ಟು ಮಾತ್ರ ತೆರಿಗೆ ಬೆಳವಣಿಗೆ ಕಂಡಿದೆ ಎಂದರು. ಯೋಜನಾ ವೆಚ್ಚದಲ್ಲೂ ನಾವು ಗಣನೀಯ ಹೆಚ್ಚಳ ಕಂಡಿ ದ್ದೇವೆ.ಪ್ರಸಕ್ತ ವರ್ಷ ೩೧,೭೫೦ ಕೋಟಿ ರೂ ನಿರೀಕ್ಷೆ ಇರಿಸಿಕೊಂ ಡಿದ್ದೇವೆ.ಈ ವರ್ಷ ಸಂಪಹ್ಮೂಲ ಸಂಗ್ರಹದ ಜತೆಗೆ ಅಭಿವೃದ್ಧಿ ಕಾರ್ಯದ ಮೇಲೆ ಹೆಚ್ಚಿನ ಹಣವನ್ನೂ ಖರ್ಚು ಮಾಡುತ್ತಿದ್ದೇವೆ.

Advertisements
Posted in: State News