ಮಾತುಕತೆ ಫಲಪ್ರದ: ಮರಳುಗಾರಿಕೆ ಮತ್ತೆ ಶುರು

Posted on April 6, 2011

0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿ ರುವ ಮರಳು ವ್ಯಾಪಾರ ಜಿಲ್ಲಾಡಳಿತ ದೊಂದಿಗೆ ನಡೆಸಿದ ಸೌಹಾರ್ದಯುತ ಮಾತುಕತೆಯಲ್ಲಿ ಎರಡು ಬಣಗ ಳೊಳಗೆ ಮತ್ತೆ ಮರಳು ವ್ಯಾಪಾರ ನಡೆಯಲಿದೆ ಎಂದು ಮರಳು ಗುತ್ತಿಗೆ ದಾರರು ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಮಯೂರ್ ಉಳ್ಳಾಲ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಐದು ದಿನಗಳಿಂದ ಕಾನೂನು ಬದ್ದವಾಗಿ ವ್ಯವಹರಿಸಲು ಜಂಟಿ ಕ್ರಿಯಾ ಸಮಿತಿ ಮರಳು ಸಾಗಾಟ ನಿಲ್ಲಿಸಿದ್ದು ಕ್ರಮಕ್ಕೆ ವಿನಂತಿ ಸಿದ್ದರೂ, ಸರ್ಕಾರ ಜಿಲ್ಲಾಡಳಿತದ ದ್ವಂದ್ವ ನಿಲುವಿನಿಂದ ನಾಗರಿಕರು ತೊಂದರೆ ಅನುಭವಿ ಸಿದ್ದಾರೆ.

ಇತ್ತೀಚೆಗೆ ಮುಖ್ಯ ಮಂತ್ರಿಗಳನ್ನು ಜಂಟಿ ಕ್ರಿಯಾ ಸಮಿತಿ ನಿಯೋಗ ಭೇಟಿ ಮಾಡಿದ್ದು ಕರಾವಳಿ ಜಿಲ್ಲೆಗೆ ಹೊಸ ಮರಳು ನೀತಿ ಅನ್ವಯಿ ಸುವು ದಿಲ್ಲ. ರಿಯಾಯಿತಿ ನೀಡಲಾಗು ವುದು ಈ ನಿಲುವನ್ನು ಸಮಿತಿ ಸ್ವಾಗತಿಸಿದೆ.

ಕಾನೂನು ಬಾಹಿರ ಮರಳು ಸಾಗಾಟದಿಂದ ಪರಿಸರದಲ್ಲಿ ಅಶಾಂತಿ ವಾತಾವರಣ ನಿರ‍್ಮಾಣವಾಗಿದೆ. ಅಧಿ ಕಾರ ದುರುಪಯೋಗ ಮತ್ತು ಕರ್ತವ್ಯ ಲೋಪ ಹಾಗು ಮಾಲೀಕರಿಗೂ, ಕಾರ್ಮಿಕರಿಗೂ, ನಾಗರಿಕರೀಕರಿಗೂ ಆಗುತ್ತಿರುವ ತೊಂದರೆಗಳನ್ನು ಸರಿ ಪಡಿಸಲು ಮಧ್ಯೆ ಪ್ರವೇಶಿಸುವಂತೆ ರಾಜ್ಯಪಾಲರು ಲೋಕಾಯುಕ್ತರು, ಮಾನವ ಹಕ್ಕುಗಳ ಆಯೋಗ ಹಾಗೂ ಮುಖ್ಯ ನ್ಯಾಯಧೀಶರಿಗೆ ಮನವಿ ಮಾಡಲಾಗಿದೆ ಎಂದವರು ತಿಳಿಸಿದರು. ಎಪ್ರಿಲ್ ಒಂದರಿಂದ ಕೆಲ ವರು ಕಾನೂನು ಬಾಹಿರವಾಗಿ ಪರ ವಾನಿಗೆ ರಹಿತವಾಗಿ ಮರಳು ಸಾಗಾಟ ಮಾಡುತ್ತಿರುವುದಕ್ಕೆ ಜಿಲ್ಲಾಡ ಳಿತ ಮತ್ತು ಸರಕಾರವೇ ಹೊಣೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ. ಪತ್ರಿಕಾ ಗೋಷ್ಠಿ ಯಲ್ಲಿ ಹಲ್ಯಾರ್ ಇಕ್ಬಾಲ್, ಮೆಲ್ವಿನ್ ಲೆಸ್ಲಿ, ಬಿ.ಎಸ್. ಚಂದ್ರ ಉಪಸ್ಥಿತರಿದ್ದರು

[cat dak]

Advertisements
Posted in: Special Report