ಮಹಿಳೆ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

Posted on April 6, 2011

0


ಮಂಗಳೂರು: ಮಹಿಳೆಯೊಬ್ಬರನ್ನು ಕತ್ತು ಹಿಸುಕಿ ಕೊಲೆಗೈದ ಆರೋಪಿಗೆ ದ.ಕ. ಜಿಲ್ಲಾ ೩ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ರೂ. ಐದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಲಿಯಾಪುರ ಯಮುನಪ್ಪ (೪೦) ಶಿಕ್ಷೆಗೊಳಗಾದ ಆರೋಪಿ. ಈತ ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ೬ನೇ ಬ್ಲಾಕ್‌ನಲ್ಲಿರುವ ಚಕ್ರವರ್ತಿ ಮೈದಾನದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ೧ ಜೂನ್. ೨೦೧೦ರ ರಾತ್ರಿ ತನ್ನೊಂದಿಗಿದ್ದ ವಿಜಯಲಕ್ಷ್ಮಿ (೩೫) ಎಂಬಾಕೆಯನ್ನು ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಕೊಲೆಗೈದಿದ್ದ. ಇದೀಗ ತೀರ್ಪು ಹೊರಬಿದ್ದಿದ್ದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ರೂ .ಐದು ಸಾವಿರ ದಂಡ ವಿಧಿಸಲಾಗಿದೆ. ದಂಡ ನೀಡಲು ವಿಫಲವಾದಲ್ಲಿ ಮತ್ತೆ ಆರು ತಿಂಗಳ ಹೆಚ್ಚುವರಿ ಕಾಲ ಶಿಕ್ಷೆಯನ್ನು ವಿಸ್ತರಿಸಿ ತೀರ್ಪು ನೀಡಿದೆ.

Advertisements
Posted in: Crime News