ಬಸ್ಸಿನ ಟಾಪ್ ಮೇಲೆ ಐದು ಕೋಟಿ ಹಣ!

Posted on April 6, 2011

0


ಚೆನ್ನೈ: ಮತದಾರರಿಗೆ ವಿತರಿ ಸಲೋ ಅಥವಾ ಬೇರಾವುದೇ ಚುನಾ ವಣಾ ಸಂಬಂಧಿತ ಅಕ್ರಮಗಳಿಗಾ ಗಿಯೋ ಬಸ್ಸಿನ ಟಾಪ್(ಚಾವಣಿ) ಮೇಲೆ ಹಾಕಿಕೊಂಡು ತರಲಾಗಿದ್ದ ಐದು ಕೋಟಿ ೧೧ ಲಕ್ಷ ರೂಪಾಯಿ ಮೊತ್ತದ ಗರಿ ಗರಿ ನೋಟುಗಳ ರಾಶಿ ಯನ್ನು ಚುನಾವಣಾಧಿಕಾರಿಗಳು ಮಂಗಳವಾರ ನಸುಕಿನ ವೇಳೆ ತಿರುಚ್ಚಿ ವೆಸ್ಟ್ ಕ್ಷೇತ್ರದಿಂದ ವಶಪಡಿಸಿಕೊಂ ಡಿದ್ದಾರೆ.

ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ರಾಜ್ಯದಲ್ಲಿ ಇದುವರೆಗೆ ದೊರೆತ ಗರಿಷ್ಠ ಮೊತ್ತದ ಅಕ್ರಮ ಹಣ ಇದು ಎನ್ನಲಾಗುತ್ತಿದೆ. ಸುಳಿವು ಪಡೆದ ಅಧಿಕಾರಿಗಳು ನಸುಕು ಹರಿಯುವ ಮುಂಚೆ ೨ ಗಂಟೆಯ ಕತ್ತಲಲ್ಲಿ ಪೊನ್ನಾ ಗರದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಿಂದ ಈ ಹಣ ವಶಪಡಿಸಿಕೊಂಡಿದ್ದಾರೆ. ೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟು ಗಳನ್ನು ಬಸ್‌ನ ಟಾಪ್ ಮೇಲೆ ಐದು ಚರ್ಮದ ಚೀಲಗಳಲ್ಲಿ ಸುತ್ತಿ ಡಲಾಗಿತ್ತು. ಅಧಿಕಾರಿಗಳು ಬಸ್ಸನ್ನು ತಪಾಸಣೆ ಮಾಡುತ್ತಿರುವಾಗ ಅನತಿ ದೂರದಲ್ಲಿ ಕಾರಿನ ಬಳಿ ನಿಂತಿದ್ದ ಕೆಲ ವರು ಓಡಿ ಪರಾರಿಯಾದರು. ಇದು ಯಾರಿಗೆ ಸೇರಿದ ಹಣ ಎಂಬುದರ ಪತ್ತೆ ಕಾರ್ಯ ಮುಂದುವರಿದಿದೆ. ಬಸ್ ಮತ್ತು ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾ ಗಿದೆ.ವಶಪಡಿಸಿಕೊಂಡ ಹಣವನ್ನು ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಒಪ್ಪಿಸಲಾಗಿದ್ದು, ಅವರು ತನಿಖೆ ಮುಂದುವರಿಸಲಿದ್ದಾರೆ.

ಡಿಎಂಕೆ ನಾಯಕ, ಮಾಜಿ ಕೇಂದ್ರ ಸಚಿವ, ಈಗ ಜೈಲಿನಲ್ಲಿರುವ ಎ.ರಾಜಾ ಮೂಲಕ ೨ಜಿ ಸ್ಪೆಕ್ಟ್ರಂ ಹಂಚಿಕೆ ವಿತರಣೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಕುರಿತು ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಯಲ್ಲಿ ತಮಿಳುನಾಡು ಚುನಾವಣೆಗಳ ಮೇಲೂ ಈ ಭ್ರಷ್ಟಾಚಾರದ ಹಣ ಹರಿದು ಬರುತ್ತಿದೆಯೇ ಎಂಬುದು ಜನರಲ್ಲಿ ಎದ್ದಿರುವ ಸಂದೇಹ. ಇದೇ ವೇಳೆ, ತಿರುಚಿ ವೆಸ್ಟ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ, ರಾಜ್ಯದ ಸಾರಿಗೆ ಸಚಿವ ಕೆ.ಎನ್.ನೆಹ್ರು ಈ ಹಣ ತನ್ನ ಸಂಬಂಧಿಕರಿಗೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisements
Posted in: National News