ಬಜರಂಗಿ ಅಟ್ಟಹಾಸಕ್ಕೆ ಅಮಾಯಕ ಕೃಷಿಕ ಬಲಿ

Posted on April 6, 2011

0


ಕಾರ್ಕಳ: ಕಾರ್ಕಳ-ಕುಂದಾಪುರ ತಾಲೂಕು ಗಡಿ ಭಾಗವಾಗಿರುವ ಹೆಬ್ರಿ ಬೆಳಿಂಜೆಯ ಅಲ್ಬಡಿ ಎಂಬಲ್ಲಿ ಕಳೆದ ೨೦ ದಿನಗಳ ಹಿಂದೆ ಬಜರಂಗಿಗಳ ಅಟ್ಟಹಾಸಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಕೃಷಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.

ಕುಂದಾಪುರ ನೂಜೆಟ್ಟುವಿನವರಾಗಿದ್ದು, ಪ್ರಸ್ತುತ ಹೆಬ್ರಿಯ ಬೆಳಿಂಜೆಯ ಮಾಬ್ಳಿಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಾಗಿದ್ದ ದಯಾನಂದ ಶೆಟ್ಟಿ (೫೫) ಎಂಬವರು ಘಟನೆ ಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ, ನಿನ್ನೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ಕೃಷಿಕರಾಗಿರುವ ದಯಾನಂದ ಅವರಿಗೆ ಸುಮಾರು ಎಂಟು ಎಕರೆಯಷ್ಟು ತೋಟವಿದೆ ಎಂದು ತಿಳಿದುಬಂದಿದೆ. ತೆಂಗು, ಭತ್ತ, ಅಡಿಕೆ ಸೇರಿದಂತೆ ಇತರ ಕೃಷಿ ಬೆಳೆಸಿ ಸಂಸಾರ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಹೈನುಗಾರಿಕೆ ಉದ್ದೇಶದಿಂದ ಇವರು ಅಲ್ಬಡಿ ಎಂಬಲ್ಲಿನ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜಯರಾಂ ಶೆಟ್ಟಿ ಮತ್ತು ಪ್ರಭಾಕರ್ ಶೆಟ್ಟಿ ಅವರಿಂದ ಜಾನುವಾರುಗಳನ್ನು ಖರೀದಿಸಿ ಮನೆಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ತಪ್ಪು ಮಾಹಿತಿ ಪಡೆದಿದ್ದ ಬಜರಂಗಿ ಗಳ ಗುಂಪೊಂದು ದಾರಿಗಡ್ಡವಾಗಿ ನಿಂತು ಜಾನುವಾರು ಕಳವುಗೈದು ಸಾಗಿಸುವುದೆಲ್ಲಿಗೆಂದು ಪ್ರಶ್ನಿಸಿ ಕೃಷಿಕ ದಯಾನಂದ ಶೆಟ್ಟಿ ಅವರ ಮೇಲೆ ಮಾರಾಣಾಂತಿಕವಾಗಿ ಹಲ್ಲೆಗೈದಿದ್ದರು.

ಪರಿಣಾಮವಾಗಿ ತಲೆ, ಬೆನ್ನು, ಕಾಲಿನ ಭಾಗಗಳಿಗೆ ತೀವ್ರತರದಲ್ಲಿ ಪೆಟ್ಟು ಬಿದ್ದಿತೆಂದು ತಿಳಿದುಬಂದಿದೆ. ಧರ್ಮದ ಉನ್ಮಾದದಲ್ಲಿದ ಆ ಯುವಕರು ಗಾಯಾಳುವನ್ನು ನೇರವಾಗಿ ಶಂಕರನಾರಾಯಣ ಠಾಣೆಗೆ ಎಳೆದೊಯ್ದು ಠಾಣಾಧಿಕಾರಿ ಮುಂದೆ ಹಾಜರು ಪಡಿಸಿ ದರು.

ಠಾಣೆಯಲ್ಲಿ ಫ್ಯಾನ್‌ನಡಿಯಲ್ಲಿ ಕುಳಿತಿದ್ದ ಪೊಲೀಸರು ಸತ್ಯಾಂಶವನ್ನು ಅರಿಯದೆ ಗಾಯಾಳು ದಯಾನಂದ ಅವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು. ಜಾನುವಾರು ಕಳವು ಪ್ರಕರಣದಡಿಯಲ್ಲಿ ಕೇಸು ದಾಖಲಿಸಿದ್ದರು. ಶೇಡಿಮನೆಯಲ್ಲಿ ಜಾನುವಾರು ಕಳವು ಎಂಬ ಪೀಠಿಕೆ ನೀಡಲಾಗಿತ್ತು. ಮಾರಣಾಂತಿಕ ಹಲ್ಲೆಗೈದ ಆರೋಪಿಗಳು ಸ್ಥಳದಲ್ಲಿಯೇ ಉಪಸ್ಥಿತರಿದ್ದರೂ, ಅವರನ್ನು ಬಂಧಿಸುವ ಗೋಜಿಗೆ ಪೊಲೀಸರು ಮುಂದಾಗಲಿಲ್ಲ. ಇದಕ್ಕೆ ರಾಜಕೀಯ ಒತ್ತಡವೇ ಕಾರಣವೆನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ದಯಾನಂದರವರನ್ನು ಅವರ ಮನೆಮಂದಿಯ ಗಮನಕ್ಕೆ ತಾರದೆಯೇ ಕುಂದಾ ಪುರದ ಚಿನ್ಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಅಲ್ಲಿ ಕೆಲ ದಿನಗಳ ಕಾಲ ಒಳ ರೋಗಿಯಾ ದಾಖಲಾಗಿದ್ದರು. ಸ್ಥಿತಿ ಗಂಭೀರ ಇದ್ದುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿನ ತೀವ್ರ ನಿಗಾ ವಿಭಾಗದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಗಾಯಾಳು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಮೃತರ ಮನೆ ಮಂದಿಗೆ ಹಾರಿಕೆಯ ಉತ್ತರ ನೀಡುತ್ತಿರುವ ಶಂಕರನಾರಾಯಣ ಪೊಲೀಸರು ದಾಳಿಕೋರರ ಮಾಹಿತಿ ನೀಡಿದರೆ ಕೇಸು ದಾಖಲಿಸುತ್ತೇವೆಂದು ತಿಳಿಸುತ್ತಿದ್ದಾರೆ.

ಶಾಸಕರ ವಿರುದ್ಧ ತಿರುಗಿ ಬಿದ್ದಿ ಬಂಟರು!

ಬಜರಂಗಿಗಳ ಅಟ್ಟಹಾಸಕ್ಕೆ ಬಲಿಯಾದ ದುರ್ದೈವಿ ದಯಾನಂದ ಶೆಟ್ಟಿ ಮೂಲತಃ ಕುಂದಾಪುರ ತಾಲೂಕಿನವರು ಬಂಟ ಸಮುದಾಯಕ್ಕೆ ಸೇರಿದವ ರಾಗಿದ್ದಾರೆ. ಕುಂದಾಪುರ ವಿಧಾನಸಭೆಯಿಂದ ನಿರಂತರವಾಗಿ ಆಯ್ಕೆಯಾಗುತ್ತಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕೂಡಾ ಬಂಟ ಸಮುದಾಯಕ್ಕೆ ಸೇರಿದವರು. ಘಟನೆಯಲ್ಲಿ ಗಾಯಗೊಂಡಿದ್ದ ದಯಾನಂದ ಶೆಟ್ಟಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವಿಚಾರ ಶಾಸಕರ ಗಮನಕ್ಕೂ ಬಂದಿತ್ತಾದರೂ ಅವರು ಇತ್ತ ಗಮನ ಹರಿಸಿಲ್ಲವೆಂಬ ದೂರು ಅವರ ಸಮುದಾಯದಿಂದಲೇ ಕೇಳಿಬರುತ್ತಿದೆ.

Advertisements
Posted in: Crime News