ಬಂಗಾರದ ಅವಕಾಶವನ್ನು ತಪ್ಪಿಸಿಕೊಂಡೆ: ಪ್ರವೀಣ್

Posted on April 6, 2011

0


ನವದೆಹಲಿ: ಗಾಯದ ಸಮಸ್ಯೆ ಯಿಂದ ತಂಡದಿಂದ ಹೊರಗುಳಿದು ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗುವ ಬಂಗಾರದ ಅವಕಾಶವನ್ನು ಕಳೆದು ಕೊಂಡೆ ಎಂದು ವೇಗಿ ಪ್ರವೀಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಈ ಬಗ್ಗೆ ಹೆಚ್ಚಿನ ಬೇಸರ ವಿಲ್ಲ ಯಾಕೆಂದರೆ ಗಾಯಗೊಳ್ಳುವುದನ್ನು ನಾವು ಮುಂಚಿತ ವಾಗಿ ಊಹಿಸಿಕೊಳ್ಳುವುದು ಅಸಾಧ್ಯ ಎಂದು ಹೇಳಿರುವ ಪ್ರವೀಣ್ ಮುಂಬರುವ ಐಪಿಎಲ್‌ನಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisements
Posted in: Sports News