ಪುರಸಭೆ ನಿರ್ಣಯಕ್ಕೆ ಕೋರ್ಟ್ ತಡೆ

Posted on April 6, 2011

0


ಬಂಟ್ವಾಳ: ಐಡಿಎಸ್‌ಎಂಟಿ ಯೋಜನೆಯಡಿ ಬಿ.ಸಿ.ರೋಡಿನ ಬಸ್ ಸ್ಟ್ಯಾಂಡ್ ಬಳಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣಕ್ಕೆ ಮೆಟ್ಟಿಲು ರಚಿಸುವ ಪುರಸಭೆ ನಿರ್ಣಯಕ್ಕೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯ ತಡೆ ಯಾಜ್ಞೆ ನೀಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ನಿರ್ದೇಶನದಂತೆ ಕಟ್ಟಡವನ್ನು ನಿರ್ಮಿಸಲಾಗಿದ್ದರೂ, ಬಳಿಕ ಯೋಜ ನೆಯ ಮೂಲ ನಕ್ಷೆಯನ್ನು ಬದಲಾ ಯಿಸಿ ಪ್ರತ್ಯೇಕ ಮೆಟ್ಟಿಲುಗಳನ್ನು ರಚಿ ಸಲು ಮುಂದಾದ ಪುರಸಭೆ, ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಸರ್ಕಾರದ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಪುರ ಸಭೆಯ ಈ ಉಲ್ಲಂಘನೆಯನ್ನು ಪ್ರಶ್ನಿಸಿದ ವಾಣಿಜ್ಯ ಸಂಕೀರ್ಣದ ವರ್ತಕ ಕೆ.ಎಸ್.ಹಸನಬ್ಬ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಾರ್ವಜನಿಕರ ಹಿತ ದೃಷ್ಟಿಯನ್ನು ಗಮನಿಸಿದ ನ್ಯಾಯಾಲಯ, ಮೆಟ್ಟಿಲು ರಚನೆ ಹಾಗೂ ಮೂಲ ನಕ್ಷೆ ಬದಲಾ ವಣೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳ ಬಾರದಾಗಿ ಪುರಸಭೆಯನ್ನು ಎಚ್ಚರಿಸಿದೆ. ಪುರಸಭೆ ಅಧಿಕಾರಿಗಳ ನಿರ್ಧಾರ ಅವೈ ಜ್ಞಾನಿಕ ಹಾಗೂ ಕಾನೂನು ಬಾಹಿರ ಎಂದು ಆರೋಪಿಸಿದ ಹಸನಬ್ಬ ಈ ಹಿಂದೆ ಮಂಗಳೂರು ಸಹಾಯಕ ಆಯುಕ್ತರಿಗೂ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣವನ್ನು ಪರಿಶೀಲಿಸಿದ ಸಹಾಯಕ ಆಯುಕ್ತರು ಮೆಟ್ಟಿಲು ರಚನೆಗೆ ತಡೆ ಆದೇಶ ನೀಡಿದ್ದರು. ಈ ಆದೇಶದ ವಿರುದ್ಧ ಪುರಸಭೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಆಕ್ಷೇಪವನ್ನು ವ್ಯಕ್ತ ಪಡಿಸಿತ್ತು.

Advertisements