ಪಣಪಿಲ ಗ್ರಾಮದ ಮನೆ ನಿರ್ಮಾಣ ತೆರವಿಗೆ ತೀವ್ರ ಹೋ ರಾಟ

Posted on April 6, 2011

0


ಮೂಡಬಿದ್ರೆ: ಧರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲದ ಬುಳ್ಳೆಪಾಡಿ ಎಂಬಲ್ಲಿ ಸುಧಾಕರ ಡಿ ಪೂಜಾರಿ ಯವರು ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡುವಾಗ ಮೂಡಬಿದಿರೆಯ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ತಡೆದು ಬಡವರ ಮೇಲೆ ಗಧಾ ಪ್ರಹಾರ ಮಾಡಿದ್ದಾರೆ. ಧರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇರಳ ಮೂಲದವರು ಬಂದು ಸುಮಾರು ೩೦ಕ್ಕೂ ಹೆಚ್ಚು ಎಕರೆಗಳಷ್ಟು ಭೂ ಕಬಳಿಸಿ ರಬ್ಬರ್ ಪ್ಲಾಂಟೇಶನ್ ಮಾಡಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಪಂಚಾಯತ್‌ಗೆ ಮತ್ತು ತಹಶೀಲ್ದಾರರಿಗೆ ದೂರು ನೀಡಿದ್ದರೂ ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದೆ ತಹಶೀಲ್ದಾರರು ಪೂರ್ವಗ್ರಹ ಪೀಡಿತರಾಗಿ ಪಣಪಿಲಕ್ಕೆ ಆಗಮಿಸಿ ಸುಧಾಕರರವರಿಗೆ ಒಂದು ಶರ್ಟ್ ಹಾಕಲು ಅವಕಾಶ ನೀಡದೆ ತಮ್ಮ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಮನೆ ಇಲ್ಲದಿದ್ದರೆ ಮಂಗಳೂರಿನಲ್ಲಿ ಮನೆಯನ್ನು ಕೊಡುತ್ತೇನೆ ಎಂದು ಗದರಿಸಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ಇದನ್ನು ವಿರೋ ಧಿಸಿದಾಗ ತಮ್ಮ ನಿಲುವನ್ನು ತಹಶೀಲ್ದಾರರು ಬದಲಿ ಸಿದ್ದಾರೆ. ಅಲ್ಲದೆ ಸುಧಾಕರವರಿಗೆ ನ್ಯಾಯವನ್ನು ಬೇಡಿದ ಸ್ಥಳೀಯರ ಬಗ್ಗೆ ಪತ್ರಿಕೆಯಲ್ಲಿ ತಿರುಚಿ ಬರೆದಿದ್ದಾರೆ. ಸುಮಾರು ೧೦ ವರ್ಷಗಳಿಂದ ನಿವೇಶನಕ್ಕಾಗಿ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಪಂಚಾ ಯತ್‌ನ ಅಧಿಕಾರಿಗಳು ಸ್ಪಂದಿಸದಿದ್ದದ್ದು ಮನೆ ಕಟ್ಟಲು ಅನಿವಾ ರ್ಯವಾಯಿತು ಎಂದು ಸುಧಾಕರ ಹೇಳಿದರು.

ಧರೆಗುಡ್ಡೆ ಪಂಚಾಯತ್ ವ್ಯಾಪ್ತಿಯಲ್ಲಿ ಶೇ ೮೦ರಷ್ಟು ಅಕ್ರಮ ಮನೆಗಳಿವೆ. ಅಲ್ಲದೆ ಸುಧಾಕರರವರು ಅತಿಕ್ರಮಿಸಿದ ಜಾಗದ ಹಿಂದಿನ ಮತ್ತು ಮುಂದಿನ ಜಾಗಕ್ಕೆ ಪಂಚಾಯತ್ ಹಕ್ಕು ಪತ್ರ ನೀಡಿದೆ. ಆದರೆ ಮಧ್ಯ ಜಾಗದಲ್ಲಿರುವ ೦.೩ಸೆಂಟ್ಸ್ ಗೋಮಾಳ ಜಾಗವೆಂದು ತಹಶೀಲ್ದಾರರು ಹೇಳಿದ್ದಾರೆ. ಅದು ಹೇಗೆ ಸಾಧ್ಯ? ಎಕರೆಗಟ್ಟಲೆ ಜಮೀನನ್ನು ಅತಿಕ್ರಮಿಸಿ ರಬ್ಬರ್ ಪ್ಲಾಂಟೇಶನ್ ಮಾಡಿದಾಗ ಯಾವುದೇ ಅಧಿಕಾರಿಗಳು ಗಮನ ಹರಿಸದೇ ಬಡವರಾದ ಸುಧಾಕರರವರಿಗೆ ಮನೆ ನಿರ್ಮಾಣ ಮಾಡಲು ಅವಕಾಶವಿಲ್ಲವೇ? ಮೂಡಬಿದ್ರೆ ಹೋಬಳಿಯಲ್ಲಿ ಎಕರೆಗಟ್ಟಲೆ ಜಾಗದ ಅತಿಕ್ರಮಣದ ಬಗ್ಗೆ ದೂರುಗಳಿದ್ದರೂ ತಹಶೀಲ್ದಾ ರರು ಯಾಕೆ ತಡೆಯುವುದಿಲ್ಲ ಕಂದಾಯ ಇಲಾಖೆ ನಿದ್ದೆ ಮಾಡು ತ್ತಿದೆಯೇ? ನಿರ್ದಿಷ್ಟ ಅವಧಿಯಲ್ಲಿ ಸುಧಾಕರ ಪೂಜಾರಿ ಯವರಿಗೆ ನಿವೇಶನ ನೀಡದಿದ್ದರೆ ಪಂಚಾಯತ್‌ನ ಎದುರು ಹೋರಾಟ ಅನಿವಾರ್ಯ. ಈ ಬಗ್ಗೆ ಎಪ್ರಿಲ್ ೧೯ರಂದು ಮೂಡಬಿದ್ರೆ ತಹಶೀಲ್ದಾರರ ಕಛೇರಿಯ ಎದುರು ರೈತ ಸಂಘವು ಉಗ್ರ ಹೋರಾಟ ಮಾಡಲಿದೆ ಎಂದು ಕರ್ನಾಟಕ ಪ್ರಾಂತ್ಯ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಹೇಳಿದರು. ಸ್ಥಳದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisements