ಜೋಡಿ ಸಂಘಟನೆ ವಶಕ್ಕೆ

Posted on April 6, 2011

0


ಮಂಗಳೂರು: ಉಳ್ಳಾಲ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ ವಿವಾಹಿತೆ ಹಾಗೂ ಆಕೆಯ ಪ್ರಿಯತಮನನ್ನು ಸ್ಥಳೀಯ ಹಿಂದೂ ಸಂಘಟನೆ ಕಾರ‍್ಯಕರ್ತರು ವಶಕ್ಕೆ ತೆಗೆದುಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಗಂಡ ವಿದೇಶದಲ್ಲಿರುವ ಕುಂಪಲದ ನಿವಾಸಿ ವಿವಾಹಿತೆ ಮಹಿಳೆ ಮನೆ ಸಮೀಪದ ಪ್ರಿಯಕರ ನವೀನ್ ಎಂಬಾತನೊಂದಿಗೆ ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ವಿಹರಿಸುತ್ತಿದ್ದರು. ಮಾಹಿತಿ ಪಡೆದ ಮಹಿಳೆಯ ಪರಿಚಯದವರು ಸಂಘಟನೆ ಕಾರ‍್ಯಕರ್ತರಿಗೆ ತಿಳಿಸಿದ್ದಾರೆ. ಅವರು ಸಮುದ್ರ ಕಿನಾರೆಗೆ ತೆರಳಿ ಇಬ್ಬರಿಗೂ ಎಚ್ಚರಿಕೆ ನೀಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ.

Advertisements
Posted in: Crime News