ಕ್ರಿಕೆಟ್ ಅಭಿಮಾನವೋ… ಭಾವ ಪ್ರಚೋದನೆಯೋ?

Posted on April 6, 2011

0


ವಿಶ್ಲೇಷಣೆ

ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಹಣಾ ಹಣಿ ಮುಗಿದು, ಭಾರತ ವಿಶ್ವ ಕ್ರಿಕಿಟ್‌ನ ಚಾಂಪಿಯನ್ ಆಗಿ ಮೂಡಿ ಬಂದಿದೆ. ಸೆಣಸಿದ ಪಂದ್ಯಗಳ ಪೈಕಿ ಇಂಗ್ಲೆಂಡ್ ತಂಡದೊಂದಿಗಿನ ಸಮಬಲ (ಟೈ) ಹಾಗೂ ದ.ಆಫ್ರಿಕಾದೊಂದಿಗಿನ ಸೋಲನ್ನು ಹೊರತುಪಡಿಸಿ ವಿಶ್ವದ ಉಳಿ ದೆಲ್ಲ ದೇಶಗಳನ್ನು ಮಣಿಸಿದ ಭಾರತ ವೀರೋಚಿತ ಜಯವನ್ನು ದಾಖಲಿಸಿದೆ. ನಿಜಕ್ಕೂ ಭಾರತೀಯ ತಂಡದ ಆಟ ಗಾರರು ಅಭಿನಂದನಾರ್ಹರು.

ಮೊನ್ನೆ ಮೊನ್ನೆ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಕ್ಕಿಂತಲೂ ಭಾರತೀಯ ಅಭಿಮಾನಿಗಳ ಪಾಲಿಗೆ ಮೊಟೇರಾದಲ್ಲಿ ನಡೆದ ಭಾರತ-ಪಾಕಿಸ್ತಾನ ನಡು ವಿನ ಸೆಮಿಫೈನಲ್ ಪಂದ್ಯವೇ ಕುತೂಹಲ ರೋಮಾಂ ಚನಕಾರಿಯಾಗಿತ್ತು ಎನ್ನುವುದಕ್ಕೆ ಅವರು ತೋರಿದ್ದ ಅಭಿ ಮಾನದ ಪರಾಕಾಷ್ಠೆಯೇ ಸಾಕ್ಷಿ.

ಹೇಳಿಕೇಳಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಯಾವುದೇ ಪಂದ್ಯವೂ ಕುತೂಹಲಕಾರಿಯೇ. ಅದೊಂದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹೈವೋಲ್ಟೇಜ್ ಮ್ಯಾಚ್ ಎಂದೇ ಪ್ರಸಿದ್ಧಿ. ಭಾರತ ಮತ್ತು ಪಾಕಿಸ್ತಾನಗಳ ನಡುವಿದ್ದ ಮತ್ತು ಇನ್ನೂ ಇದ್ದಿರುವ ಹತ್ತು ಹಲವು ಬಗೆಹರಿಸಲಾಗದ (?) ಭಾವನಾತ್ಮಕ ವಿಚಾರಗಳು, ಈ ಕ್ರಿಕೆಟ್ ಎಂಬ ಕ್ರೀಡೆಯ ಮೂಲಕ ಸಂಘರ್ಷ, ಸಮರ, ಕದನಗಳಂತಹ ಸನ್ನಿವೇಶ ನಿರ್ಮಿಸುವಂ ತಿರು ವುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಅದೇನೇ ಇರಲಿ, ಕ್ರಿಕೆಟ್ ಮೇಲಿರುವ ವಿಶ್ವದ ಜನರ ಅದರಲ್ಲೂ ಏಷ್ಯಾ ಉಪಖಂಡದ ಜನರ ಮನದಲ್ಲಿ ಮೊಳೆತು ವ್ಯಕ್ತ ವಾಗುವ ಭಾವನೆಗಳು ಅಭಿಮಾನವೋ ಅಥವಾ ಭಾವೋ ನ್ಮಾದವೋ ಎಂಬ ಸಂದೇಹ ಮೂಡಿಸುವಂತಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯಾಟ ನಡೆವಾಗಿನ ಪ್ರತಿ ಎಸೆತದಿಂದ ಹಿಡಿದು ಕೊನೆಯ ಎಸೆತದ ವರೆಗೂ ಬೆಟ್ಟಿಂಗ್ ಎಂಬುದು ಯಾವ ಪ್ರಮಾಣದಲ್ಲಿ ನಡೆಯುತ್ತದೆ ಎಂಬುದನ್ನು ವಿವರಿಸಲಸಾಧ್ಯ. ಇದೊಂದು ಕೋಟ್ಯಂತರ ರೂಪಾಯಿಗಳ ವಹಿವಾಟು; ಜೂಜು. ಆದರೆ ಈ ಅಭಿಮಾನವೆಂಬುದಿದೆಯಲ್ಲ ಇದು ಆ ಜೂಜಿ ಗಿಂತಲೂ ಅಪಾಯಕಾರಿ. ಭಾರತದಂತಹ ಸೂಕ್ಷ್ಮ ದೇಶ ದಲ್ಲಿ ಕ್ರಿಕೆಟ್‌ನಂತಹ ಕ್ರೀಡೆಯನ್ನು ಇತ್ತಂಡಗಳ ಆಟಗಾರರ ಮೇಲಿನ ಅಭಿಮಾನದಿಂದ ವೀಕ್ಷಿಸುವುದು, ಬೆಂಬಲಿ ಸುವುದು ಅಸಾಧ್ಯದ ಮಾತೇ ಸರಿ. ಏಕೆಂದರೆ ಇಲ್ಲಿ ಭಾರತದಲ್ಲಿ ಪಾಕಿಸ್ತಾನ ಗೆದ್ದರೆ ನೈಜ ಕ್ರಿಕೆಟ್ ಅಭಿಮಾನಿ ಯೋರ್ವ ಸಂತಸ ಪಡುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ. ಸಿಹಿ ಹಂಚುವಂತಿಲ್ಲ. ಆತ ಬಹುಸಂಖ್ಯಾತ ಭಾರತೀಯ ಅಭಿಮಾನಿಗಳ ಎದುರು ಅಭಿಮಾನ ವ್ಯಕ್ತಪಡಿಸುವಂತೆಯೇ ಇಲ್ಲ. ಏಕೆಂದರೆ ಆತ ಭಾರತ ವಿರೋಧಿ ಪಾಕಿಸ್ತಾನದ ಬೆಂಬಲಿಗನಾಗಿ ಗುರುತಿಸಲ್ಪಡುತ್ತಿದ್ದ. ಇಲ್ಲಿ ಆಟಗಾರನ ಕ್ರೀಡಾಪರತೆ, ಸಾಧನೆ ಗೌಣವಾಗಿ ಆತ ಪ್ರತಿನಿಧಿಸುವ ದೇಶದ ’ಇಮೇಜ್’ ಮುಖ್ಯವಾಗುತ್ತದೆ. ಆ ಪಾಕ್ ಬೆಂಬಲಿಗ ಇರುವ ದೇಶ (ಭಾರತ), ಆತನ ಪಡಿತರ ಚೀಟಿಗಳೆಲ್ಲಾ ಚರ್ಚೆಗೆ ಒಳಗಾಗುತ್ತದೆ.

ಭಾರತದಲ್ಲಿರುವ ಯಾವನೇ ನಾಗರಿಕ ಈ ರಾಷ್ಟ್ರದ ಸಾರ್ವಭೌಮತೆಗೆ, ಪ್ರತಿಷ್ಠೆಗೆ, ಸಂವಿಧಾನಕ್ಕೆ ಬದ್ಧನಾಗಿರಲೇ ಬೇಕು. ನಿಜ, ’ನಮ್ಮ ದೇಶ ನಮ್ಮ ಜನ’ ಎಂಬ ಅಭಿಮಾನ ಹೊಂದಿರಬೇಕೂ ನಿಜ. ಆದರೆ ಅದು ಯಾವಾಗ ನಗದಾಗಬೇಕೆಂದರೆ ಶತ್ರುರಾಷ್ಟ್ರ ಭಾರತದ ಮೇಲೆ ದಂಡೆತ್ತಿ ಬಂದಾಗ ಗಡಿ ವಿವಾದ ಎದ್ದಾಗ, ಆಕ್ರಮಣಗಳಾದಾಗ, ಸೌಹಾರ್ದತೆಯ ಮೇಲೆ ದಾಳಿಯಾದಾಗ, ನಗರ ಪಟ್ಟಣ ಗಳಲ್ಲಿ ಶಾಂತಿಭಂಗವಾದಾಗ ಮಾತ್ರ ಹೊರತು ಕ್ರಿಕೆಟ್‌ನಲ್ಲಿ ಅಫ್ರಿದಿ ಶತಕ ಬಾರಿಸಿದಾಗಲಾಗಲೀ, ಅಖ್ತರ್ ವಿಕೆಟ್ ಕಿತ್ತಾಗಲಾಗಲೀ ಅಲ್ಲವಲ್ಲವೇ? ಮೊನ್ನೆ ನಡೆದ ಭಾರತ -ಲಂಕಾ ನಡುವಿನ ಪಂದ್ಯದ ಸಮಯ ಉಡು ಪಿಯ ಪ್ರಚಾರಪ್ರಿಯ ಪಡೆಯೊಂದು ಫೈನಲ್ ಪಂದ್ಯವನ್ನು ರಾಮ-ರಾವಣರ ನಡುವಿನ ಕದನವೆಂಬಂತಹ ಸ್ಕಿಟ್ ತಯಾರಿಸಿ ಉಡುಪಿಯಲ್ಲಿ ಪ್ರದರ್ಶಿ ಸಿತ್ತು. ಅಸಲಿಗೆ ಇವರ ನಂಬಿಕೆಯೆಂದರೆ ಲಂಕನರೆಲ್ಲ ರಾವಣರು ಮತ್ತು ಭಾರತೀ ಯರೆಲ್ಲರೂ ರಾಮ ಸಂತತಿಯವರೆಂ ಬುದಾಗಿತ್ತು. ಕ್ರಿಕೆಟ್‌ಗೆ ಈ ಬಣ್ಣ ಬಳಿ ಯುವುದು ಎಷ್ಟು ಸರಿ? ಅಥವಾ ಇದು ಧರ್ಮಯುದ್ಧವೇ? ಇವರೊಮ್ಮೆ ಖ್ಯಾತ ಯಕ್ಷಗಾನ ಕಲಾವಿದ ಶೇಣಿ ಗೋಪಾ ಲಕೃಷ್ಣ ಭಟ್ಟರ ’ವಾಲಿ ವಧೆ’ ಯಕ್ಷಗಾನ ತಾಳಮದ್ದಲೆಯನ್ನು ಆಲಿಸಿದರೆ ರಾವಣ ನೆಂಬವ ಸಿಂಹಳ ದ್ವೀಪದಲ್ಲಿ ಯಾವ ರೀತಿಯ ಸಾರ್ವ ಭೌಮನಾಗಿದ್ದ, ಆತ ಎಂತಹ ಶಿವಭಕ್ತನಾಗಿದ್ದ, ಯಾವ ಪರಿ ರುದ್ರವೀಣೆಯ ವಾದಕನಾಗಿದ್ದ, ಸೀತೆಯನ್ನು ಕದ್ದೊ ಯ್ದರೂ ದೂರದ ಅಶೋಕನವನದಲ್ಲಿಟ್ಟು (ತನಗೆ ಸಾಧ್ಯತೆ ಯಿದ್ದರೂ) ಮಾನಭಂಗ ಮಾಡದೆ ಕಾಪಾಡಿದ್ದ. (ನಮ್ಮ ರಾಮಭಕ್ತರು ದಾಂಗುಡಿಯೆಬ್ಬಿಸುವ ಪಬ್ ಇತ್ಯಾದಿ ಪ್ರಕರಣಗಳನ್ನು ಕ್ಷಣಕಾಲ ಮರೆತುಬಿಡಿ) ಎಂಬುದು ವೇದ್ಯವಾಗಬಹುದು.

ಟಿ.ವಿ. ವಾಹಿನಿಯೊಂದು ಲಂಕಾ ನಾಯಕ ಕುಮಾರ ಸಂಗಕ್ಕರನಿಗೆ ಇನ್ನಿತರ ಹತ್ತು ಮಂದಿ ಆಟಗಾರರ ತಲೆ ಜೋಡಿಸಿ ದಶಕಂಠನನ್ನಾಗಿಸಿತ್ತು. ಹತ್ತು ತಲೆಗಳ ಚಿಂತನೆಗಳಿದ್ದ ರಾವಣ ಸೋಲನ್ನೂ ಕೊನೆಗೆ ಯಾವ ಪರಿ ಸ್ವೀಕರಿಸಿದ ಎಂಬುದಕ್ಕೆ ಪಂದ್ಯಾ ನಂತರ ಸಂಗಕ್ಕರ ಆಡಿದ ಮಾತುಗಳೇ ಸಾಕ್ಷಿ, ನಿದರ್ಶನ.

ಇನ್ನು ಪೂನಂ ಪಾಂಡೆ ಎಂಬ ಬಿಚ್ಚೋಲೆ ಗೌರಮ್ಮನ ಸಂಗತಿ. ಮಾಡೆಲಿಂಗ್ ಪ್ರಪಂಚದಲ್ಲಿ ಎಲ್ಲವನ್ನೂ ಈಗಾಗಲೇ ಬಿಚ್ಚಿ, ಬಿಚ್ಚಲು ಇನ್ನೇನನ್ನೂ ಬಾಕಿ ಉಳಿಸಿಕೊಂಡಿರದ ಈಕೆ ಭಾರ ತೀಯ ಆಟಗಾರರ ಎದುರು ಬೆತ್ತಲಾ ಗುವ ಇಂಗಿತ ವ್ಯಕ್ತಪಡಿಸಿದ್ದಾಳೆ.

ಈ ಮಾತು ಕೇಳಿ ಅಲ್ಲಿಂದ ನಗಬೇಕೆಂದೇ ಗೊತ್ತಾಗದೆ ಕಂಗಾಲಾ ಗಿದ್ದಾನೆ ಭಾರ ತೀಯ ಕ್ರಿಕೆಟ್ ಅಭಿ ಮಾನಿ. ಏಕೆಂದರೆ ಕ್ರಿಕೆಟಿಲ್ಲದ ದಿನಗಳಲ್ಲಿ ಒಂದೊಂದು ದಿನ ಒಬ್ಬೊಬ್ಬರು ಸಿನೆಮಾ ತಾರೆ ಯರೊಂದಿಗೆ ಆ ಪಾರ್ಟಿ, ಈ ಪಾರ್ಟಿ ಎಂದು ರಾತ್ರಿ ಬೆಳಗು ಮಾಡುವ ನಮ್ಮ ರಾಮ ಸಂತತಿ ಯ ಆಟಗಾರರಿಗೆ ಈ ಪೂನಂ ಪಾಂಡೆ ಎಂಬ ಸಣಕಲು ಮಾಡೆಲ್ ತೋರಿ ಸುವುದಾದರೂ ಏನನ್ನು ಎಂಬುದೇ ಈ ನಗುವಿನ ಹಿಂದಿರುವ ಸತ್ಯ.

ಅಷ್ಟಕ್ಕೂ ಬೆತ್ತಲೆ, ಭಾರತೀಯ ನಾರಿ, ಕೇಸರಿ, ಧರ್ಮ ಎಂದಾಗಲೆಲ್ಲ ಅಂಡು ಸುಟ್ಟವರಂತೆ ವರ್ತಿಸುವ ನಿರ್ದಿಷ್ಟ ಮಂದಿ ಈಕೆಯ ಬೋಲ್ಡ್ ಹೇಳಿಕೆಯ ಮುಂದೆ ಥಂಡಾ ಹೊಡೆ ದಂತಾಗಿರುವುದಾದರೂ ಏಕೆಂದು ಗೊತ್ತಾಗುತ್ತಿಲ್ಲವಲ್ಲವೇ?

Advertisements
Posted in: National News