ಕೃಷ್ಣಾಪುರದಲ್ಲಿ ಸಾಮೂಹಿಕ ಸರಳ ವಿವಾಹ

Posted on April 6, 2011

0


ಮಂಗಳೂರು: ಕೃಷ್ಣಾಪುರದಲ್ಲಿರುವ ನ್ಯೂ ಫ್ರೆಂಡ್ಸ್ ಸರ್ಕಲ್ ಸಂಘಟನೆಯ ವತಿಯಿಂದ ಎ.೭ರಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಚೊಕ್ಕಬೆಟ್ಟುವಿನ ಎಂಜೆಎಂ ಹಾಲ್‌ನಲ್ಲಿ ಸಾಮೂಹಿಕ ಸರಳ ವಿವಾಹ ನಡೆಯಲಿದೆ. ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದಾರೆ. ಉಳ್ಳಾಲ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕೃಷ್ಣಾಪುರ ಜುಮಾ ಮಸೀದಿಯ ಖತೀಬ್ ಇ.ಕೆ. ಇಬ್ರಾಹಿಂ ಮದನಿ ನಿಕಾಹ್‌ನ ನೇತೃತ್ವ ವಹಿಸಲಿದ್ದಾರೆ. ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಡಾ. ಶಾಂತರಾಂ ಶೆಟ್ಟಿ, ಎಂಆರ್‌ಪಿಎಲ್‌ನ ಮೇನೇಜಿಂಗ್ ಡೈರಕ್ಟರ್ ಯು.ಕೆ. ಬಸು, ಬಿ.ಎ. ಮೊಯ್ದಿನ್‌ಬಾವಾ, ಬಿ.ಎಂ. ಮುಮ್ತಾಜ್ ಅಲಿ, ನೌಶಾದ್ ಕೃಷ್ಣಾಪುರ, ಬಜ್ಪೆ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಮೊದಲಾದವರು ಭಾಗವಹಿಸಲಿದ್ದಾರೆ. ಬಜ್ಪೆ ತೋಕೂರಿನ ಉಞ್ಞಿ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಅಬ್ದುಲ್ ಸತ್ತಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements