ಕೂಸಿಗೂ ಮುನ್ನ ಕುಲಾವಿ: ಪಡುಬಿದ್ರಿ ಮೀನು ಮಾರು ಕಟ್ಟೆ ಸಂಕೀರ್ಣ

Posted on April 6, 2011

0


ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸ ಲ್ಪಡಲಿದೆಯೆಂದು ಭಾರೀ ಅಬ್ಬರದೊಂ ದಿಗೆ ಶಂಖು ಸ್ಥಾಪನೆ ನೆರವೇರಿಸಿಕೊಂ ಡಿದ್ದ ಪಡುಬಿದ್ರಿಯ ನೂತನ ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ನಡೆಯದೇ ಇರುವುದು ಸಾರ್ವಜನಿಕವಾಗಿ ನಗೆ ಪಾಟಲೀಗೀಡಾಗಿದೆ.

ಕೇಂದ್ರ ಸರಕಾರದ ಬಹುಪಾಲು ಅನುದಾನ ಮತ್ತು ರಾಜ್ಯ ಸರಕಾರದ ಹತ್ತು ಶೇಕಡಾ ಸಹಭಾಗಿತ್ವದೊಂದಿಗೆ ಸುಮಾರು ೮೦ ಲಕ್ಷ ರೂಪಾಯಿ ವೆಚ್ಚ ದಲ್ಲಿ ಈ ಬಹುಮಹಡಿಯ ಮೀನುಗಾ ರಿಕಾ ಸಂಕೀರ್ಣ ಪ್ರಸ್ತಾವಿಸಲಾಗಿತ್ತು. ರಾಜ್ಯದ ಬಿಜೆಪಿ ಸರಕಾರ ಮೀನು ಗಾರರಿಗೆ ನೀಡಿದ ಮಹದುಡುಗೊರೆ ಎಂಬಂತೆ ಬಿಂಬಿಸಿ ಕಳೆದ ಜನವರಿ ಯಲ್ಲಿ ಈ ಮಾರುಕಟ್ಟೆ ಸಂಕೀರ್ಣಕ್ಕೆ ತರಾತುರಿಯಲ್ಲಿ ಶಂಕು ಸ್ಥಾಪನೆ ನೆರ ವೇರಿಸಲಾಗಿತ್ತು.

ಆದರೆ ಇದೀಗ ಕೇಂದ್ರ ಸರಕಾರದ ಅನುದಾನ ಬಿಡುಗಡೆಗೊಂಡಿದ್ದರೂ ರಾಜ್ಯ ಸರಕಾರದ ವ್ಯಾಪ್ತಿಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರಾಸಕ್ತಿಯಿಂ ದಾಗಿ ಯೋಜನೆಯ ಟೆಂಡರ್ ಪ್ರಕ್ರಿಯೆ ನಡೆದಿಲ್ಲವೆಂಬುದಾಗಿ ಸಂಬಂಧಿತ ಅಧಿಕಾ ರಿಯೋರ್ವರು ಪತ್ರಿಕೆಗೆ ತಿಳಿಸಿದ್ದಾರೆ. ಪ್ರಸ್ತಾವಿತ ಸಂಕೀರ್ಣ ಮೂರು ಮಹಡಿಯನ್ನೊಳ ಗೊಳ್ಳಲಿದ್ದು ತಳ ಅಂತಸ್ತಿನಲ್ಲಿ ಹಸಿ ಮೀನು ಮಾರಾಟದ ೪೦ ಮಳಿಗೆಗಳು, ಮೊದಲ ಅಂತಸ್ತಿನಲ್ಲಿ ಒಣಮೀನು ಮಾರಾಟ ಮಳಿಗೆಗಳು ಮತ್ತು ಮೂರನೆಯ ಅಂತಸ್ತಿನಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿಗಳ ಸಹಿತ ಹಲ ವಾರು ಸೌಲಭ್ಯಗಳು ಪ್ರಸ್ತಾಪಿಸಲ್ಪಟ್ಟಿದ್ದವು.

ಪಡುಬಿದ್ರಿ ಹೊರತುಪಡಿಸಿದಂತೆ ಉಡುಪಿ ಜಿಲ್ಲೆಯ ಕಟಪಾಡಿ ಮತ್ತು ಕಾಪುವಿನಲ್ಲಿ ಹಾಗೂ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಹಲವೆಡೆ ಇಂತಹ ಯೋಜನೆಗಳು ಪ್ರಸ್ತಾಪಿಸ ಲ್ಪಟ್ಟಿದ್ದವು. ಪಡುಬಿದ್ರಿ ಸಂಕೀರ್ಣದ ಉದ್ಘಾಟನೆಯೂ ಬಿಜೆಪಿ ಮತ್ತು ಕಾಂಗ್ರೆಸ್ ಜನಪ್ರತಿನಿಧಿಗಳ ನಡುವಿನ ಸ್ವಂತಿಕೆಯ ಸಂಘರ್ಷಕ್ಕೆ ಕಾರಣ ವಾಗಿದ್ದನ್ನಿಲ್ಲಿ ಸ್ಮರಿಸಬಹುದು.

Advertisements