ಕಾರ್ಕಳ: ಪಲ್ಟಿ ಹೊಡೆದ ವೇಗದೂತ!

Posted on April 6, 2011

0


ಮಂಗಳೂರು: ನಿನ್ನೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಂಗಳೂರಿನಿಂದ ಕಾರ್ಕಳಕ್ಕೆ ಬರುತ್ತಿದ್ದ ವೇಗದೂತ ಬಸ್ ಆನೆಕೆರೆ ಜಂಕ್ಷನ್ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಂದಕಕ್ಕೆ ಪಲ್ಟಿ ಹೊಡೆದ ಘಟನೆ ನಿನ್ನೆ ನಡೆದಿದೆ. ವಿಶಾಲ್ ಮೋಟಾರ‍್ಸ್ ಕಂಪೆನಿಗೆ ಸೇರಿದ್ದ ಬಸ್ ಪಲ್ಟಿಯಾಗಿದ್ದು, ಚಾಲಕ ಸುನಿಲ್‌ಗೆ ಏಕಾಏಕಿ ತಲೆ ತಿರುಗಿದ್ದೇ ನಿಯಂತ್ರಣ ಕಳೆದುಕೊಳ್ಳಲು ಕಾರಣವೆನ್ನಲಾಗಿದೆ. ಈ ವೇಳೆ ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ಹಿಂದಿನ ನಿಲ್ದಾಣದಲ್ಲಿ ಇಳಿದಿದ್ದರಿಂದ ಕೇವಲ ಐದಾರು ಮಂದಿ ಮಾತ್ರ ಬಸ್‌ನಲ್ಲಿ ಇದ್ದರು. ಬಸ್ ನಿರ್ವಾಹಕ ಮಂಜು ಹಾಗೂ ಪ್ರಯಾಣಿಕ ಮಹಿಳೆ ರಾಧಾ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisements
Posted in: Crime News