ಕಾಮಕಾಂಡದ ವರದಿ ಟಿವಿಯಲ್ಲಿ ಪ್ರಸಾರಗೊಂಡ ಹಿನ್ ನೆಲೆ: ನಕಲಿ ಬಾಬಾನ ಮನೆ ಧ್ವಂಸ

Posted on April 6, 2011

0


ಬಂಟ್ವಾಳ: ಭೂತ ಪಿಶಾಚಿ ಓಡಿಸುತ್ತೇನೆ ಎಂದು ಹೇಳಿ ಸುಮಾರು ಇಪ್ಪತ್ತೈದು ವರ್ಷಗಳಿಂದ ವಂಚಿಸಿ ಮಹಿಳೆರೊಂದಿಗೆ ಅನೈತಿಕವಾಗಿ ವರ್ತಿಸುತ್ತಿದ್ದ ವಗ್ಗ ಬಾಂಬಿಲದ ಅಬೂಬಕರ್ ಮಸ್ತಾನ್ ಎಂಬ ನಕಲಿ ಬಾಬಾನ ಕಾಮಕಾಂಡದ ವರದಿ ನಿನ್ನೆ ರಾತ್ರಿ ಟಿವಿಯೊಂದರಲ್ಲಿ ವರದಿಯಾಗುತ್ತಿ ದ್ದಂತೆ ರಾತ್ರಿಯೇ ಮನೆಗೆ ಸಾರ್ವಜನಿಕರು ದಾಳಿ ನಡೆಸಿ ಕಲ್ಲು ತೂರಾಟ ನಡೆಸಿ ಸೊತ್ತು ಗಳನ್ನು ಧ್ವಂಸಗೊಳಿಸಿದ್ದು, ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.

ಬಾಂಬಿಲದ ಅಬೂಬಕರ್ ಮಸ್ತಾನ್ ‘ಅಮ್ಮ ಜಾನ್ ಬಾಬಾ ಜಾನ್ ಎಂಬ ಆಸ್ತಾನವನ್ನು ತನ್ನ ಮನೆಯಲ್ಲಿ ನಡೆಸುತ್ತಾ ಬಂದಿದ್ದ. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಟಿವಿ೯ ಹಿಡನ್ ಕ್ಯಾಮರಾ ಮೂಲಕ ಆತನ ಕಾಮ ಕಾಂಡವನ್ನು ಚಿತ್ರೀಕರಿಸಿ ನಿನ್ನೆ ರಾತ್ರಿಯ ಎಪಿಸೋಡಿನಲ್ಲಿ ‘ಗಿರಗಿಟ್ಲೆ ಬಾಬಾ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿದ್ದರು. ಅಲ್ಲದೇ ಭೂತ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಕೀಟಲೆ ನೀಡಿರುವುದನ್ನು ಮೊಬೈಲ್ ಮೂಲಕ ಚಿತ್ರೀಕರಿಸಿರುವುದನ್ನು ಬಿತ್ತರಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಂದಿ ತಡಮಾಡದೆ ಭೂತ ಬಿಡಿಸುವಂತಹ ಧರ್ಮವಿರೋಧಿ ಚಟುವಟಿಕೆಯನ್ನು ಖಂಡಿಸಿ ಈತನ ಮನೆಗೆ ಕಲ್ಲು ತೂರಾಟ ನಡೆಸಿ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ನಕಲಿ ಬಾಬಾ ಅಬೂಬಕ್ಕರ್ ಮಸ್ತಾನ್ ಕುಟುಂಬ ಸಮೇತ ಪರಾರಿಯಾಗಿದ್ದನೆಂದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಉದ್ರಿಕ್ತಡಿ ಮೇಲೆ ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ರೋಹಿಣಿ ಕಟೋಚ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Advertisements
Posted in: Crime News