ಕಪ್ತಾನಿಕೆಯಿಂದ ಕೆಳಗಿಳಿದ ಸಂಗಕ್ಕರ

Posted on April 6, 2011

0


ಕೊಲಂಬೊ: ಭಾರತದ ವಿರುದ್ಧ ಫೈನಲ್‌ನಲ್ಲಿ ಸೋತು ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ನಾಯಕ ಕುಮಾರ ಸಂಗಕ್ಕರ ಏಕದಿನ ಹಾಗೂ ಟಿ.ಟ್ವೆಂಟಿಯ ನಾಯ ಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದು ಆದರೆ ಟೆಸ್ಟ್‌ನಲ್ಲಿ ತಂಡವನ್ನು ಮುನ್ನ ಡೆಸುವುದಾಗಿ ತಿಳಿಸಿದ್ದಾರೆ.

ಕೂಲಂಕುಶವಾಗಿ ಪರಿಶೀಲಿಸಿದ ನಂತರವೇ ನಾನು ಈ ನಿರ್ಧಾರಕ್ಕೆ ಬಂದಿ ದ್ದೇನೆ. ನಿಜವಾಗಿ ಹೇಳಬೇಕೆಂದರೆ ಸರಿ ಯಾದ ಸಮಯದಲ್ಲೇ ನಾಯಕತ್ವವನ್ನು ತ್ಯಜಿಸಿದ್ದು ಇದು ಮುಂದಿನ ವಿಶ್ವಕಪ್‌ಗೆ ಸಮರ್ಥ ನಾಯಕ ಸಿಗುವಂತೆ ಮಾಡಲಿದೆ.

ಮುಂದಿನ ವಿಶ್ವಕಪ್ ವೇಳೆಗೆ ನಾನು ೩೭ರ ಹರೆಯಕ್ಕೆ ಕಾಲಿರಿಸಲಿದ್ದು ಅಲ್ಲಿಯವರೆಗೆ ಆಡುವ ಬಗ್ಗೆ ನನ್ನಲ್ಲಿ ವಿಶ್ವಾಸವಿಲ್ಲ ಎಂದು ಸಂಗಕ್ಕರ ತಿಳಿಸಿದ್ದು ಆದರೆ ಇನ್ನೂ ಎರಡು ಮೂರು ವರ್ಷಗಳ ಕಾಲ ತಂಡದಲ್ಲಿ ಆಡುವ ಬಗ್ಗೆ ಸಂಗಕ್ಕರ ಇಚ್ಛೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisements
Posted in: Sports News