ಎಡರಂಗ ಐಕ್ಯರಂಗಗಳಿಂದ ಅಭಿವೃದ್ಧಿ ಶೂನ್ಯ: ಸುಷ್ ಮಾ

Posted on April 6, 2011

0


ಮಂಜೇಶ್ವರ: ಕೇರಳದಲ್ಲಿ ಅದಲು ಬದಲಾಗಿ ಆಡಳಿತ ನಡೆಸುವ ಎಡರಂಗ ಹಾಗೂ ಐಕ್ಯರಂಗಗಳು ಖಜಾನೆ ಬರಿದಾಗಿಸುವ ಉದ್ದೇಶ ಮಾತ್ರ ಹೊಂದಿರುವುದರಿಂದ ಅಭಿವೃದ್ಧಿ ಕಾರ‍್ಯ ಶೂನ್ಯವಾಗಿದೆ ಎಂದು ಲೋಕಸಭಾ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟರು. ಪೆರ್ಲದಲ್ಲಿ ಮಂಜೇಶ್ವರ ಮಂಡಲ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ವಾಜಪೇಯಿ ಸರಕಾರ ಜಾರಿಗೊಳಿಸಿದ ಜನೋಪಯೋಗಿ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಜನತೆಗೆ ತಲುಪಿಸಲು ಸಾಧ್ಯ ವಾಗದ ಇಂದಿನ ರಾಜ್ಯಾಡಳಿತಕ್ಕೆ ಕೇಂದ್ರದ ಯೋಜನೆ ಬದಲಾಯಿಸಿ ತನ್ನ ಸ್ವಂತ ಫಂಡ್ ಎಂದು ಚುನಾವಣೆಯಲ್ಲಿ ಬೊಗಳೆ ಬಿಡಲು ನಾಚಿಕೆ ಆಗುವುದಿಲ್ಲವೇ ಎಂದು ಲೇವಡಿ ಮಾಡಿದರು. ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಮಂಜೇಶ್ವರ ಮಂಡಲ ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಟಿ.ಆರ್.ಕೆ ಭಟ್, ಎಂಎಲ್‌ಸಿ ಗಣೇಶ್ ಕಾರ್ಣಿಕ್, ಬಿಜೆಪಿ ರಾಜ್ಯಾಧ್ಯಕ್ಷ ವಿ.ಮುರಳೀಧರನ್, ಚುನಾವಣಾ ಅಭ್ಯರ್ಥಿ ಕೆ.ಸುರೇಂದ್ರನ್ ಇದ್ದರು.

Advertisements