ಆಸ್ತಿ ತೆರಿಗೆಯಲ್ಲಿ ಹೆಚ್ಚಳ: ಸಿಪಿಎಂ ಖಂಡನೆ

Posted on April 6, 2011

0


ಮಂಗಳೂರು: ಸ್ವಯಂಘೋ ಷಿತ ಆಸ್ತಿ ತೆರಿಗೆಯನ್ನು ಪ್ರಸ್ತುತ ವರ್ಷದಿಂದಲೇ ಮತ್ತೆ ೧೫%ರಷ್ಟು ಹೆಚ್ಚಳ ಮಾಡಿ ಜನರ ಬದುಕಿಗೆ ಮಾರಕ ಹೊಡೆತ ನೀಡಿದ ಬಿಜೆಪಿ ನೇತೃತ್ವದ ಮನಪಾ ಆಡಳಿತದ ಜನವಿರೋಧಿ ಕ್ರಮವನ್ನು ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್‌ವಾದಿ) ಮಂಗಳೂರು ನಗರಸಮಿತಿ ತೀವ್ರವಾಗಿ ಖಂಡಿಸಿದೆ.

ವಿಶ್ವಬ್ಯಾಂಕಿನ ನಿರ್ದೇಶನಕ್ಕೆ ಮಣಿದ ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ನಗರ ಪ್ರದೇಶಗಳಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯ ನೆಪದಲ್ಲಿ ಜನರನ್ನು ಸುಲಿಗೆ ಮಾಡ ಹೊರಡಿತು. ಈ ಸಂದರ್ಭದಲ್ಲಿ ಮನ ಪಾದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದರ ವಿರುದ್ಧ ಸಿಪಿಐಎಂ ಅಂದು ಪ್ರಬಲ ಹೋರಾಟ ನಡೆಸಿತ್ತು. ಆದರೆ ಬಿಜೆಪಿಯವರು ಇದಕ್ಕೆ ಧಾರ್ಮಿಕ ಲೇಪವ ಸವರಿ ಕೋಮುಭಾವನೆ ಕೆರಳಿಸಿ ವಿರೋಧದ ನಾಟಕವಾಡಿತ್ತು. ಆದರೆ ಇಂದು ಅದೇ ಬಿಜೆಪಿಯವರು ೨೦೦೮ರಲ್ಲಿ ಮನಪಾದಲ್ಲಿ ಜಾರಿಗೆ ತಂದಿರುವುದು ವಿಪರ‍್ಯಾಸವಾಗಿದೆ. ಈ ಸಂದರ್ಭ ದಲ್ಲೂ ಸಿಪಿಐಎಂ ನಿರಂತರವಾಗಿ ಹೋರಾಟ ನಡೆಸಿ ದ್ದರ ಪ್ರತಿಫಲವಾಗಿ ಮತ್ತೆ ಸರ್ಕಾರದ ಗಮನಕ್ಕೆ ತರಲಾಯಿತೇ ಹೊರತು ಕಾಂಗ್ರೆಸ್‌ನವರಿಂದಲ್ಲ. ಆಸ್ತಿ ತೆರಿಗೆಯನ್ನು ರಾಜ್ಯಕ್ಕೆ ಪರಿಚಯಿಸಿದ ಕಾಂಗ್ರೆಸ್‌ನವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಸಿಪಿಐಎಂ ಆಪಾದಿಸಿದೆ.

Advertisements