ಅಕ್ರಮ ಜಾನುವಾರು ಸಾಗಾಟ: ಸೆರೆ

Posted on April 6, 2011

0


ಮಂಗಳೂರು: ಬೈಂದೂರು ಠಾಣಾ ಪೊಲೀಸರು ಸ್ಕಾರ್ಪಿಯೋ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಿನ್ನೆ ನಡೆದಿದೆ. ಬಂಧಿತರನ್ನು ಪಡುಬಿದ್ರಿ ನಿವಾಸಿ ಅಶ್ರಫ್(೩೦) ಹಾಗೂ ಮೂಲ್ಕಿ ನಿವಾಸಿ ಸಾಕಿಬ್(೩೦) ಎಂದು ಗುರುತಿಸಲಾಗಿದೆ. ಇಬರಿಬ್ಬರೂ ಕುಖ್ಯಾತ ದನಗಳ್ಳರಾಗಿದ್ದು, ಕಾರಿನಲ್ಲಿ ಏಳು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಕೊಲ್ಲೂರು-ಯಡ್ತರೆ ರಸ್ತೆಯಲ್ಲಿ ಗೋಸಾಗಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಕಾರ್ಪಿಯೋ ಕಾರನ್ನು ಸಂಶಯದಿಂದ ತಡೆದಿದ್ದು, ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಪೊಲೀ ಸರು ಬೆನ್ನಟ್ಟಿ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಏಳು ಜಾನುವಾರು ಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

Advertisements
Posted in: Crime News