ಸಿ.ಎಂ.ಭ್ರಷ್ಟಾಚಾರ: ವಿಚಾರಣೆ ಪುನರಾರಂಭಿಸಿ ಲೋಕ ಾಯುಕ್ತಕ್ಕೆ ಜಾತ್ಯತೀತ ಜನತಾದಳ ಮನವಿ

Posted on April 2, 2011

0


ಬೆಂಗಳೂರು: ಯಡಿಯೂರಪ್ಪ ಅವರ ವಿರುದ್ಧವಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾ ರಣೆಯನ್ನು ಪುನರಾರಂಭಿಸಿ ನ್ಯಾಯ ದೊರಕಿಸಿ ಕೊಡಿ ಎಂದು ಜಾತ್ಯತೀತ ಜನತಾದಳ ಲೋಕಾಯುಕ್ತ ಸಂತೋ ಷ್ ಹೆಗ್ಡೆಯವರಿಗೆ ಮನವಿ ಮಾಡಿದೆ.

ಯಡಿಯೂರಪ್ಪ ವಿರುದ್ಧ ಎಲ್ಲಾ ಪ್ರಕರಣಗಳಿಗೆ ಯಾವುದೇ ತನಿಖೆ ನಡೆ ಸದಿರುವಂತೆ ಹೈ ಕೋರ್ಟ್ ತಡೆ ಯಾಜ್ಞೆ ನೀಡುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ ದತ್ತಾ ಲೋಕಾಯುಕ್ತರಿಗೆ ಈ ಮನವಿ ಸಲ್ಲಿಸಿದ್ದಾರೆ. ಹಗರಣಗಳಿಗೆ ಸಂಬಂಧಿ ಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ನಮ್ಮ ದೂರಿಗೆ ಸಂಬಂಧಿಸಿದಂತೆ ತಮ್ಮ ಸಂಸ್ಥೆಯು ನಡೆಸುವ ವಿಚಾರಣೆಗೆ ತಡೆ ನೀಡದಿರುವುದರಿಂದ ತಾವು ಈ ಸಂಬಂಧ ವಿಚಾರಣೆಯನ್ನು ಪುನರಾ ರಂಭಿಸಬೇಕು. ಇಬ್ಬರು ಜವಾಬ್ದಾರಿ ವಕೀಲರು ಮುಖ್ಯಮಂತ್ರಿಯವರ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಕ್ರಿಮಿನಲ್ ದಾವೆ ಹೂಡಲು ರಾಜ್ಯ ಪಾಲರಿಂದ ಅನುಮತಿ ಪಡೆದು ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ದ್ದಾರೆ. ಆದರೆ ಅದು ನಿರೀಕ್ಷಿತ ಕಾನೂನು ಪ್ರಕ್ರಿಯೆಯ ಜಾಡು ಹಿಡಿದು ಒಂದು ತಾರ್ಕಿಕ ಘಟ್ಟ ತಲುಪಿತೇನೋ ಎಂದು ರಾಜ್ಯದ ಜನರು ನಿರೀಕ್ಷಿಸುತ್ತಿರುವಾಗಲೇ ಅದಕ್ಕೂ ತಡೆ ಬಿದ್ದಿದೆ. ಇದರಿಂದ ಹೋ ರಾಟಗಳೆಲ್ಲ ವ್ಯರ್ಥ ಎಂಬ ಭಾವನೆ ಮೂಡಿದೆ. ಈ ಎಲ್ಲಾ ಸನ್ನಿ ವೇಶಗಳ ಹಿನ್ನೆಲೆಯಲ್ಲಿ ನಮಗಿರುವ ಏಕೈಕ ಆಶಾ ಕಿರಣವೆಂದರೆ ತಾವು ಮಾತ್ರ. ಆದ್ದರಿಂದ ತನಿಖೆಯನ್ನು ಪುನರಾರಂ ಭಿಸುವಂತೆ ಮನವಿ ಮಾಡು ತ್ತಿದ್ದೇವೆ ಎಂದಿದ್ದಾರೆ.

Posted in: State News