ಮನೆಗೆ ನುಗ್ಗಿದ ಚೋರರು

Posted on April 2, 2011

0


ಕಾರ್ಕಳ:ಇಲ್ಲಿಗೆ ಸಮೀಪದ ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಳದ ಸಮೀಪದಲ್ಲಿ ಮನೆಯೊಂ ದಕ್ಕೆ ನುಗ್ಗಿದ ಚೋರರು ನಗ-ನಗದು ಕಳವುಗೈದ ಘಟನೆ ನಡೆದಿದೆ.

ಕುಕ್ಕುಂದೂರು ಅಖ್ತಾರ್‌ಬಾನು ಎಂಬವರು ಈ ಬಗ್ಗೆ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇವರ ಪತಿ ವಿದೇಶದಲ್ಲಿ ನೆಲೆಸಿರುವುದರಿಂದ ರಾತ್ರಿ ವೇಳೆಯಲ್ಲಿ ಮಕ್ಕಳೊಂದಿಗೆ ಪತಿಯ ತಂದೆಯ ಮನೆಯಲ್ಲಿ ಇರುತ್ತಿದ್ದರು. ನಿನ್ನೆ ಮುಂಜಾನೆ ಸುಮಾರು ಆರರ ವೇಳೆಯಲ್ಲಿ ಮನೆಗೆ ಹಿಂತಿರುಗಿದ್ದಾಗ ಬೀಗ ಮುರಿದು ಒಳ ಪ್ರವೇಶಿಸಿದ ಚೋರರು ಕಪಾಟಿನಲ್ಲಿದ್ದ ಮುಕ್ಕಾಲು ಪವನ್ ಚಿನ್ನ, ಮೂರು ಸಾವಿರ ನಗದು, ಒಂದು ಮೊಬೈಲ್ ಸೆಟ್ಟನ್ನು ಕಳವುಗೈ ದಿರುವುದು ಬೆಳಕಿಗೆ ಬಂತು. ಇದರ ಒಟ್ಟು ಮೌಲ್ಯ ೧೧ ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

Posted in: Crime News