ದ್ವಿತೀಯ ದರ್ಜೆ ಸಹಾಯಕ ಅಮಾನತು

Posted on April 2, 2011

0


ಮಂಗಳೂರು: ಬೆಳ್ತಂಗಡಿ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಮಲ್ಲೇಶ್ ಇವರು ಸರಕಾರಿ ಕೆಲಸದಲ್ಲಿ ಅಸಡ್ಡೆ ಹಾಗೂ ಸಾರ್ವಜನಿಕ ಕೆಲಸ ಕಾರ‍್ಯ ನಿರ್ವಹಣೆ ಯಲ್ಲಿ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ, ಇವರ ಕರ್ತವ್ಯಲೋಪದ ಬಗ್ಗೆ ಇಲಾಖಾ ವಿಚಾರಣೆಗೆ ಪೂರ್ವ ಭಾವಿಯಾಗಿ ಇವರನ್ನು ಅಮಾನತುಗೊ ಳಿಸುವುದು ಸೂಕ್ತವೆಂದು ಪರಿಗಣಿಸ ಲಾಯಿತು., ಕರ್ನಾಟಕ ನಾಗರಿಕ ಸೇವಾ ನಿಯಾ ಮಾವಳಿ ಪ್ರಕಾರ,ಸದ್ರಿ ನೌಕರರನ್ನು ಅರೋಪಗಳ ವಿಚಾರ ಣೆಯನ್ನು ಕಾಯ್ದಿ ರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅಮಾನತಿನಲ್ಲಿಟ್ಟು ಮಂಗಳೂರು ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿರುತ್ತಾರೆ.

ಅಮಾನತಿನ ಅವಧಿಯಲ್ಲಿ ಕರ್ನಾಟಕ ಸರಕಾರಿ ನಿಯಮದಂತೆ ವಿಳಂಬನಾ ಭತ್ಯೆಗೆ ಅರ್ಹರಿರುತ್ತಾರೆ. ಕಚೇರಿ ಮುಖ್ಯ ಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡ ಬಾರದಾಗಿ ಕೂಡಾ ಆದೇಶಿಸಿಸಲಾಗಿದೆ.

Posted in: Crime News