ಉಪನಿರ್ದೇಶಕ, ಪ್ರಾಂಶುಪಾಲರ ವಿರುದ್ಧ ಕ್ರಮಕ್ಕ ೆ ದ.ಸಂ.ಸ. ಒತ್ತಾಯ

Posted on April 2, 2011

0


ಉಡುಪಿ: ವಿದ್ಯಾರ್ಥಿಗಳಿಂದ ನಿಗಧಿತ ಹಣಕ್ಕಿಂತ ಹೆಚ್ಚಿನ ಶುಲ್ಕ ಹಾಗೂ ಹಣ ದುರುಪಯೋಗ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒತ್ತಾ ಯಿಸಿದೆ. ಮೂರು ತಿಂಗಳ ಹಿಂದೆ ಆರೋಪಿ ಎಸ್‌ಎಸ್ ಶಿಂಧೆ ಹಾಗೂ ಸುರೇಶ್ ತುಂಗಾ ವಿರುದ್ಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಈ ಫೈಲು ಶಿಕ್ಷಣ ಸಚಿವರ ಮೇಜಿನ ಮೇಲಿದೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಶಿಕ್ಷಣ ಸಚಿವರೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದರು. ರಮೇಶ್ ಕೋಟ್ಯಾನ್, ಕೃಷ್ಣ ಬಜೆ, ಶುಭಕರ ಪಡುಬಿದ್ರಿ ಮೊದಲಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Posted in: Udupi District