ವ್ಯವಸ್ಥಿತ ಅಗ್ನಿಶಾಮಕದಳದಿಂದ ನಿರ್ಭೀತಿ: ಸಚಿವ ಪಾಲೆಮಾರ್

Posted on April 2, 2011

0


ಮಂಗಳೂರು: ನಾಗರಿಕ ಸಮಾ ಜದಲ್ಲಿ ನೆಮ್ಮದಿಯ, ನಿರ್ಭಯ ವಾತಾ ವರಣ ಮೂಡಬೇಕಾದರೆ ವ್ಯವಸ್ಥಿತ, ಸುಸಜ್ಜಿತ ಪೊಲೀಸ್ ಮತ್ತು ಅಗ್ನಿ ಶಾಮ ಕದಳಗಳಿರಬೇಕು ಎಂದು ಜಿಲ್ಲಾ ಉಸ್ತು ವಾರಿ ಸಚಿವರು ಹಾಗೂ ಜೀವಿಶಾಸ್ತ್ರ, ಬಂದರು ಮತ್ತು ಒಳನಾಡು ಜಲ ಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು. ಅವರು ನಗರದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರ ವೇರಿಸಿ ಮಾತನಾಡಿದರು.

ಮಂಗಳೂರು ನಗರ ದಿನೇ ದಿನೇ ಬೆಳವಣಿಗೆಯನ್ನು ಕಾಣುತ್ತಿದ್ದು, ಬಹು ಅಂತಸ್ತುಗಳ ಕಟ್ಟಡಗಳು ವ್ಯಾಪಕವಾಗಿದೆ; ಅಗ್ನಿಶಾಮಕ ಘಟಕಗಳು ನಗರದಲ್ಲಿ ಬಹು ಅಗತ್ಯವಾಗಿದ್ದು, ಇಲಾಖೆಯ ಅಗತ್ಯವನ್ನು ಪೂರೈ ಸಲು ಸರ್ಕಾರ ಬದ್ಧ ವಾಗಿದೆ ಎಂದರು. ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊ ರೇಷನ್‌ನ ಸುಮಾರು ೨.೫೨ ಕೋಟಿ ವೆಚ್ಚದ ಅಗ್ನಿಶಾಮಕ ಠಾಣಾ ಕಟ್ಟಡವನ್ನು ೧೪ ತಿಂಗಳೊಳಗೆ ಉತ್ತಮ ರೀತಿಯಲ್ಲಿ ನಿರ್ಮಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಸಮಾರಂಭದಲ್ಲಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆ ಇದರ ಮಹಾನಿರ್ದೇಶಕ ಡಾ ಡಿ ವಿ ಗುರುಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್, ಮೇಯರ್ ಪ್ರವೀಣ್ ಕುಮಾರ್, ಉಪಮೇಯರ್ ಶ್ರೀಮತಿ ಗೀತಾ, ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಾಬೂರಾಮ್ ಉಪಸ್ಥಿತರಿದ್ದರು.

Advertisements